ಪಂ. ಪುಟ್ಟರಾಜರ ಮಾಸದ ನೆನಪಿನಲ್ಲಿ ಸಂಗೀತ ಶಿವಾನುಭವ

Must Read

ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ನಾಡಿನ ಅಭಿಮಾನಿ ಭಕ್ತರನ್ನು ಒಂದೇ ವೇದಿಕೆಗೆ ತಂದು ಗುರುಸೇವೆ ಮಾಡುತ್ತಿರುವ ಗದುಗಿನ ಮೂಲದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪಂ. ಪುಟ್ಟರಾಜರ ಮಾಸದ ನೆನಪಿಗಾಗಿ ಸಂಗೀತ ಶಿವಾನುಭವ ಪ್ರಥಮ ಕಾರ್ಯಕ್ರಮವನ್ನು ದಿ. ೦೯ ಸೋಮವಾರ ಸಂಜೆ ೬-೦೦ ಗಂಟೆಗೆ ‘ಶಿವಾಚಾರ್ಯ ನಿಕೇತನ’ ಶ್ರೀ. ಷ. ಬ್ರ. ಡಾ. ಸದ್ಯೋಜಾತ ಶಿವಾಚಾರ್ಯ ಹಿರೇಮಠ ದಾವಣಗೆರೆ ಇಲ್ಲಿ ಹಮ್ಮಿಕೊಂಡಿದೆ.

ಸಂಗೀತ ಶಿವಾನುಭವದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ. ಬ್ರ. ಓಂಕಾರ ಶಿವಾಚಾರ್ಯ ಸ್ವಾಮಿಗಳು ಪುರವರ್ಗ ಹಿರೇಮಠ ಅವರಗೊಳ್ಳ, ದಾವಣಗೆರೆ ಇವರು ವಹಿಸಿಕೊಳ್ಳುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಸಮಾರಂಭದ ಉದ್ಘಾಟನೆ ಮಾಡುವರು.

ದಾವಣಗೆರೆಯ ಕುಸುಮ ಶಟ್ರು, ಸಮಾಜ ಸೇವಕರಾದ ಅಣಬೇರು ಮಂಜಣ್ಣ, ವೀರೇಶ್ವರ ಪುಣ್ಯಾಶ್ರಮ ಕಾರ್ಯದರ್ಶಿ ಎ. ಎಚ್. ಶಿವಮೂರ್ತಿಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಪರಮೇಶ್ವರಪ್ಪ ಕೆ. ಬಿ., ಅಕ್ಕನ ಬಳಗ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಇವರು ಆಗಮಿಸುವರು.

ಸಂಗೀತದಲ್ಲಿ ಶಿವನ ಕಂಡ ಅನುಭಾವಿಗಳು ಕುರಿತು, ಪ್ರೊ. ಎಸ್. ಸಿಧ್ದೇಶ ಕುರ್ಕಿ ಸಾಹಿತಿಗಳು ದಾವಣಗೆರೆ ಇವರು ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಸಂಚಾಲಕರಾದ ಶ್ರೀಮತಿ ಎಂ. ಜಿ. ಶಶಿಕಲಾ ಮೂರ್ತಿ ನಲ್ಕುದರೆ, ರಾಜ್ಯಕಾರ್ಯದರ್ಶಿ, ಪ್ರೊ. ಮಂಜುಶ್ರೀ ಬ. ಹಾವಣ್ಣವರ ಬೆಳಗಾವಿ, ಉಪಸ್ಥಿತರಿರುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕರಾದ ವೇ. ಶಿವಬಸಯ್ಯ ಚರಂತಿಮಠ (ಕಾಡಶಟ್ಟಿಹಳ್ಳಿ) ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು. ಸೋಮಯ್ಯ ಹಿರೇಮಠ ಸಾ. ಬಿಳೇಬಾಳ ಇವರಿಂದ ಗಾಯನ. ಇವರಿಗೆ ಭಾಗ್ಯವಂತ ಕಲಬುರ್ಗಿ ಹರ‍್ಮೋನಿಯಂ ಸಾಥ, ಶೇಖರ ರಬಕವಿ ತಬಲಾ ಸಾಥ ನೀಡಲಿದ್ದಾರೆ.

ಈ ಶಿವಾನುಭವ ಭಕ್ತಿಸೇವೆಯನ್ನು ಅಣಬೇರು ಮಂಜಣ್ಣ ದಾವಣಗೆರೆ ಇವರು ವಹಿಸಿಕೊಂಡಿದ್ದು ಶಿವಾನುಭವದ ನಂತರ ಮಹಾಪ್ರಸಾದವಿರುತ್ತದೆ ಎಂದು ಸೇವಾ ಸಮಿತಿ ಜಿಲಾ ಸಂಚಾಲಕ ಶಿವಬಸಯ್ಯ ಚರಂತಿಮಠ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group