“ಬೀ ಪಾಸಿಟಿವ್” ಚಿತ್ರದಲ್ಲಿ ಲಕ್ಕಿ ಎಸ್ ವಿಶ್ವಕರ್ಮ ಅಭಿನಯ

Must Read

ನಮ್ಮಲ್ಲಿ ನಮಗೆ ತಿಳಿಯದೇ ನಮ್ಮೊಳಗಿರುವ ಎಲ್ಲ ನೆಗಟಿವಿಟಿ ಗಳನ್ನ ತೆಗೆಯುವ ಚಿತ್ರ ಈ “ಬೀ ಪಾಸಿಟಿವ್”.

ಪಾಸಿಟಿವ್ ಅನ್ನೋ ಪದವೇ ಭಯ ಹುಟ್ಟಿಸೋ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಧೈರ್ಯ ತುಂಬುವುದರೊಂದಿಗೆ ಅಡಗಿರುವ ಮಾನವಿಯತೆಯನ್ನು ಹೊರತೆಗೆಯಲು ಬೀ ಪಾಸಿಟಿವ್ ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕ ವೀರ. ಮೂಲತಃ ಬೆಂಗಳೂರಿನವರೆ ಆದ ಉಪೇಂದ್ರ ಅವರ Inspiration ಲ್ಲಿ ಬೆಳೆದಂಥ ,ವೀರ ರವರು, ಸುಮಾರು ಸಿನಿಮಾಗಳಲ್ಲಿ ಸಹನಿರ್ದೇಶಕರಾಗಿ, ಕಾರ್ಯನಿರ್ವಹಿಸಿದ್ದಾರೆ , ಸ್ವತಂತ್ರ ನಿರ್ದೇಶಕನಾಗಿ ಸಿನಿಮಾ ಮಾಡಲು ಪ್ರಯತ್ನದಲ್ಲಿರುವ ವೀರ, ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕೊರೊನಾದ ಆಗು ಹೋಗನ್ನು ತಮ್ಮ ಕಿರುಚಿತ್ರದ ಮೂಲಕ ಸಮಾಜಕ್ಕೆ ತೋರಿಸಲು ಮುಂದಾಗಿದ್ದಾರೆ.

ಸಾಕಷ್ಟು ಹೊಸ ಕಲಾವಿದರನ್ನೇ ಬಳಸಿಕೊಂಡು ಈ ಕಿರುಚಿತ್ರ ಮಾಡಿದ್ದಾರೆ.

ಬೆಳ್ಳಿಪರದೆಗೆ ಅವರು ಚೊಚ್ಚಲ ಬಾರಿಗೆ ನಿರ್ದೇಶಕರಾಗಿ ಬಿ ಪಾಜಿಟೀವ್ ಎಂಬ ಕಿರು ಚಿತ್ರವನ್ನು ಹೊಸ ಪ್ರತಿಭೆಗಳೊಂದಿಗೆ ಸೇರಿ ಕೈ ಹಾಕಿದ್ದಾರೆ, ಈಗಾಗಲೇ ಈ ಕಿರುಚಿತ್ರಕ್ಕೆ ಹಲವಾರು ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ ಬಂದಿದೆ. ಕಿರುಚಿತ್ರದ ಮುಖ್ಯ ಪಾತ್ರದಲ್ಲಿ ಧರಣ್ ಮತ್ತು ನಮ್ಮ ಉತ್ತರ ಕರ್ನಾಟಕದ ನವ ಕಲಾವಿದ ಲಕ್ಕಿ ನಟಿಸಿದ್ದಾರೆ, ಲಕ್ಕಿ ಎಸ್ ವಿಶ್ವಕರ್ಮ ಬಿ ಪಾಜಿಟೀವ್ ಕಿರುಚಿತ್ರದಲ್ಲಿ ಒಂದು ಅದ್ಭುತ ವಾದ ಪಾತ್ರ ಎಲ್ಲರ ಮನಸ್ಸು ಮುಟ್ಟುವ ಪ್ರತಿಯೊಬ್ಬ ಮಾನವಿಯತೆವುಳ್ಳ ಮನುಷ್ಯರು ಮನಸೋಲುವ ಪಾತ್ರವನ್ನು ಲಕ್ಕಿ ಮಾಡಿದ್ದಾರೆ ,ಅವರ ಪಾತ್ರದ ಕುರಿತು ಒಂದಿಷ್ಟು ಗುಟ್ಟನ್ನು ಬಿಟ್ಟು ಕೊಡದೆ ,ನಿರ್ದೇಶಕರು ಗೌಪ್ಯತೆಯನ್ನು ಕಾಪಾಡಿದ್ದಾರೆ. ಲಕ್ಕಿ ಅವರ ಕುರಿತು ನಿರ್ದೇಶಕರಾದ ವೀರ ಅವರು ತುಂಬಾ ಮೆಚ್ಚುಗೆಯ ಮಾತನಾಡಿದ್ದಾರೆ, ಅವರನ್ನ ಸೋದರನಂತೆ ಎಲ್ಲಾ ವಿಷಯಗಳಲ್ಲುತೊಡಗಿಸಿಕೊಂಡಿದ್ದಾರೆ. ಬರವಣಿಗೆ,ನಟನೆ ಮತ್ತು ಸಹ ನಿರ್ದೇಶನ ಮಾಡುವ ,ಎಲ್ಲಾ ಕಲೆಯನ್ನು ಒಳಗೊಂಡಿರುವ ಲಕ್ಕಿಯನ್ನು ಮನಃಪೂರಕವಾಗಿ ಹೊಗಳಿದ್ದಾರೆ ಮತ್ತು ಮುಂಬರುವ ದೊಡ್ಡ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಲು ಎಲ್ಲಾ ರೀತಿಯ ಸಿಧ್ಧತೆಗಳನ್ನು ಮಾಡಿದ್ದಾರೆ.

ಬಿ ಪಾಜಿಟೀವ್ ತೆರೆಕಂಡ ಮೇಲೇ ನೋಡಿ ಆ ಸಿನಿಮಾ ಅದ್ಭುತವಾಗಿ ಮೂಡಿ ಬರುವದರ ಯಶಸ್ಸು ನಿರ್ದೇಶಕರಾದ ವೀರ ಅವರಿಗೆ ಸಲ್ಲುತ್ತೆ ಎಂದು ಹೇಳಿರುವ ಲಕ್ಕಿ ,ಗೆ ಇಂದು ಜನ್ಮದಿನದ ಸಂಭ್ರಮ ಬಿ ಪಾಜಿಟೀವ್ ತೆರೆಕಾಣುವ ಖುಷಿಯಲ್ಲಿರುವ ಅವರು ನಮ್ಮ ,ಚಿತ್ರದಲ್ಲಿ ಎಲ್ಲಾ ಕಲಾವಿದರು ತಂತ್ರಜ್ಞರು ತಮ್ಮ ತಮ್ಮ ಕೆಲಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ರಾಕೇಶ್ ರವರು ಬಂಡವಾಳ ಹೂಡಿದ್ದಾರೆ. ನಿರ್ಮಾಣದ ನಿರ್ವಹಣೆಯನ್ನ ಹರೀಶ್ ಮುನ್ನಡೆದಿದ್ದಾರೆ, ಸಂಗೀತ ವಿಜೇತ್, ಛಾಯಾಗ್ರಹಣ ರಾಘವೇಂದ್ರ ಮತ್ತು ನವೀನ್ ಸೂರ್ಯ, ಗೌತಮ್ ಸಂಕಲನ, ಮೋಹನ್ ಸಹನಿರ್ದೇಶನ ಮತ್ತು ಡಿಐ ಮತ್ತು ವಿಎಫೆಕ್ಸ್ ಶಿವಕುಮಾರ್ ಮಾಡಿದ್ದಾರೆ ಇದೇ ತಿಂಗಳು 19ನೆ ತಾರೀಖು ಭಾನುವಾರ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಚಿತ್ರರಂಗದ ಸೂಪರ ಸ್ಟಾರ್ ಡಾ ಶಿವರಾಜ್ ಕುಮಾರ್ ರವರು ರಿಲೀಸ್ ಮಾಡಲಿದ್ದಾರೆ. ಈ ಚೊಚ್ಚಲ ಪ್ರಯತ್ನಕೆ ನಮ್ಮ ಟೈಮ್ಸ್ ಆಫ್ ಕರ್ನಾಟಕ ವೆಬ್ ಬಳಗ ಶುಭ ಹಾರೈಸುತ್ತದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group