ನಮ್ಮ ಶ್ರೀಮಂತ ಸಂಸ್ಕೃತಿಯ ವಿಷಯಗಳನ್ನು ಕೇಳುತ್ತಾ, ಹಂಚಿಕೊಳ್ಳುತ್ತಾ ಮತ್ತು ಸೃಜನ ದೃಶ್ಯಾವಳಿ ಮೂಲಕ ಅರಿವು ಮೂಡಿಸುತ್ತಾ ನಂದಿ ವಾಹಿನಿ ಸಮುದಾಯವನ್ನು ರೂಪಿಸುವುದು. ಸೃಜನಶೀಲರಿಗೆ ತಮ್ಮ ಚಿಂತನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ. ನಿರಂತರವಾಗಿ ಶ್ರೋತೃ ಗಳಿಗೆ ವಿಷಯಗಳ ಪ್ರಸಾರ ಆದ್ಯತೆಯಾಗಿ ವಾಹಿನಿಯು ಜೀರಿಗೆ ಲೋಕೇಶ್ ಅವರ ಕಲ್ಪನೆಯ ಕೂಸು. ಜನ ಸಮುದಾಯಕ್ಕೆ ಏನಾದರೂ ಒಳಿತು ಮಾಡಬೇಕೆನ್ನುವ ಅವರ ತುಡಿತವೇ ನಂದಿ ವಾಹಿನಿಗೆ ಪ್ರೇರಣೆ ಎಂದು ಚಾನಲ್ ಲೋಕಾರ್ಪಣೆಗೊಳಿಸಿದ ನಿವೃತ್ತ ಡಿಜಿಪಿ ಸ್ಪೂರ್ತಿಧಾಮ ಟ್ರಸ್ಟ್ ಅಧ್ಯಕ್ಷ ಎಸ್ ಮರಿಸ್ವಾಮಿ ಅಭಿಪ್ರಾಯಪಟ್ಟರು.
ಶ್ರೋತೃ ಗಳೊಂದಿಗೆ ಸಂಪರ್ಕ ಬೆಳೆಸುವುದು, ಅವರಿಗೆ ಭಕ್ತಿ ಸಂಗೀತ, ಪ್ರೇರಣಾತ್ಮಕ ಉಪನ್ಯಾಸ, ಮಕ್ಕಳಿಗೆ ಅರಿವು ಮತ್ತು ಮನರಂಜನೆ, ಸಾಂಪ್ರದಾಯಿಕ ಅಡುಗೆ ಮತ್ತು ಜ್ಯೋತಿಷ್ಯ ಬಗ್ಗೆ ಮಾಹಿತಿ ಒದಗಿಸುವುದು. ಇಲ್ಲಿ ಗುಣಮಟ್ಟಕ್ಕೆ ಆದ್ಯತೆ. ಮೌಲ್ಯದಲ್ಲಿ ಯಾವುದೇ ರಾಜೀ ಇಲ್ಲ. ಈ ಸದುದ್ದೇಶದಿಂದ ನಂದಿ ವಾಹಿನಿ ಯೂಟ್ಯೂಬ್ ಅನ್ನು ನಮ್ಮ ಶ್ರೋತೃ ಗಳ ಮುಂದೆ ಇಡುತ್ತಿದ್ದೇವೆ ಎಂದು ಸಂಸ್ಥಾಪಕ ಜೀರಿಗೆ ಲೋಕೇಶ್ ತಿಳಿಸಿದರು.
ವಾಹಿನಿಯ ಪ್ರೋಗ್ರಾಮ್ ಮುಖ್ಯಸ್ಥ ಜಯರಾಜ್ ಕುಲಕರ್ಣಿ, ಗ್ರಾಫಿಕ್ಸ್ ಎಡಿಟರ್ ಶಿವಾನಂದ ಮೊದಲದವರು ವೇದಿಕೆಯಲ್ಲಿದ್ದರು.