ದಿ.28 ರಂದು ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ ಉದ್ಘಾಟನೆ ಹಾಗೂ”ಸಂಗೀತೋತ್ಸವ” -ಶರಣಬಸವ ಶಾಸ್ತ್ರಿಗಳು 

Must Read

ಮುಧೋಳ – ಬಾಗಲಕೋಟೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲು ಸಿದ್ಧವಾಗಿರುವ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಇದೇ ರವಿವಾರ ದಿನಾಂಕ 28ರಂದು ಸಂಭ್ರಮದಿಂದ ಸಾಂಸ್ಕೃತಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದರು.

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಬೆಳಿಗ್ಗೆ 8.30 ಕ್ಕೆ ವಿದ್ಯಾಗಿರಿಯ ಇಂಜಿನಿಯರಿಂಗ್ ಕಾಲೇಜು ಕ್ರಾಸ್ ದಿಂದ ಸಾಯಿ ಮಂದಿರದವರೆಗೆ ಡೊಳ್ಳಿನ ವಾಲಗ, ಕರಡಿ ವಾದನ, ಹಲಗೆವಾದನ, ಭಜನಾ ಮಂಡಳಿ ಮುಂತಾದ ಕಲಾವಿದರ ತಂಡದಿಂದ ವೈಭವದೊಂದಿಗೆ ಪಂ.ಪಂಚಾಕ್ಷರಿ ಗವಾಯಿಗಳ, ಪಂ.ಪುಟ್ಟರಾಜ ಗವಾಯಿಗಳ, ಹಾನಗಲ್ ಕುಮಾರೇಶ್ವರರ ಭಾವ ಭಾವಚಿತ್ರದ ಉತ್ಸವ ಜರುಗುವುದು.

10 ಗಂಟೆಗೆ ಗುಳೇದಗುಡ್ಡ ಪೂಜ್ಯರಾದ ಒಪ್ಪತ್ತೇಶ್ವರ ಶ್ರೀಗಳ ಬಿಲ್ ಕೆರೂರದ ಸಿದ್ದಲಿಂಗ ಶಿವಾಚಾರ್ಯರ, ಸಿದ್ದನಕೊಳ್ಳದ ಶಿವಾನಂದ ಮಹಾಸ್ವಾಮಿಗಳ, ರೋಣದ ಡಾ.ವಿಶ್ವನಾಥ ಶ್ರೀಗಳು, ಗುಳೇದಗುಡ್ಡದ ಅಭಿನವ ಕಾಡಸಿದ್ದೇಶ್ವರ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರ ಘನ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗುವುದು.

ಮುಖ್ಯ ಅತಿಥಿಗಳಾಗಿ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ. ಎಂ ಪಾಟೀಲ್ ಪಾಲ್ಗೊಳ್ಳುವರು. ಗದಗದ ಪಂ. ಕಲ್ಲಿನಾಥ ಶಾಸ್ತ್ರಿಗಳು ವಿಶೇಷ ಉಪನ್ಯಾಸವನ್ನು ನೀಡುವರು. ನಂತರ ಪಂಡಿತ್ ಬಸವರಾಜ್ ಭಜಂತ್ರಿ ಅಮರಾವತಿ ಇವರಿಂದ ಶಹನಾಯಿ ವಾದನ, ಪಂ.ಸಿದ್ಧರಾಮಯ್ಯ ಮಠಪತಿ [ಬಾಗಲಕೋಟೆ], ಪಂಡಿತ್ ರವೀಂದ್ರ ಸೋರಗಾಂವಿ[ಬೆಂಗಳೂರು ]ಪಂಡಿತ್ ಸದಾಶಿವ ಐಹೊಳೆ[ಧಾರಾವಾಡ]ಪಂಡಿತ್ ಜೈ ನಿರಂಜನ[ಧಾರಾವಾಡ] ಪಂ.ಅಶೋಕ ಬಡಿಗೇರ, ಬಾಗಲಕೋಟೆ ಮುಂತಾದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವದು. ಖ್ಯಾತ ತಬಲಾ ವಾದಕರು, ಹಾರ್ಮೊನಿಯಂ ವಾದಕರು ಪಾಲ್ಗೊಳ್ಳುವರು.

ಈ ಸಮಾರಂಭದಲ್ಲಿ ಸಾಹಿತಿಗಳು, ಪ್ರವಚನಕಾರರು, ಸುಗಮ ಸಂಗೀತ ಕಲಾವಿದರು, ಜನಪದ ಕಲಾವಿದರು, ರಂಗಭೂಮಿ ಕಲಾವಿದರು, ಡೊಳ್ಳು ಕಲಾವಿದರು, ಕರಡಿ ವಾದನ, ಹಲಗೆ ವಾದನ ಭಜನಾ ಮಂಡಳಿಗಳು ‌ಮಹಿಳಾ ಭಜನಾ ಮಂಡಳಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವದು ಎಂದ ಅವರು ಸಕಾಲಕ್ಕೆ ಬಂದು ಸೇವೆ ಮಾಡಿದ ಕಲಾವಿದರಿಗೆ ಕಲಾತಂಡಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದರು. ಕಾರ್ಯದರ್ಶಿ ಎಲ್ ಶಂಕರ ಉಪಸ್ಥಿತರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group