ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಎನ್.ಆರ್. ಪಾಟೀಲ ಸ್ವತಂತ್ರ ಪ.ಪೂ. ಮಹಾವಿದ್ಯಾಲಯಗಳ ೨೦೨೫-೨೬ ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಹಾಗೂ ವಿವಿಧ ವೇದಿಕೆಗಳ ಕಾರ್ಯ ಚಟುವಟಿಕೆಯ ಉದ್ಘಾಟನಾ ಸಮಾರಂಭ ಶುಕ್ರವಾರ ದಿನಾಂಕ: ೨೫-೦೭-೨೦೨೫ ರಂದು ಮುಂಜಾನೆ ೧೦-೦೦ ಗಂಟೆಗೆ ಸಂಸ್ಥೆಯ ಆವರಣದಲ್ಲಿ ಜರುಗಲಿದೆ.
ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಶಿ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಜಾ ಟಾಕೀಸ್, ಗಿಚ್ಚಿ ಗಿಲಿಗಿಲಿ ಟಿ.ವಿ. ಶೋ ಖ್ಯಾತಿಯ ಕಲಾವಿದೆಯಾದ ಕು. ನೀಲಾ ಜೇವರ್ಗಿ ಉದ್ಘಾಟಿಸುವರು. ಮಜಾ ಭಾರತ, ಕಾಮಿಡಿ ಟಾಕೀಸ್ ಟಿ.ವಿ. ಶೋ ಖ್ಯಾತಿಯ ಕಲಾವಿದರಾದ ಬಸವರಾಜ ಗುಡ್ಡಪ್ಪನವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ. ಆರ್. ಕಡಾಡಿ, ನಿರ್ದೇಶಕರುಗಳಾದ
ಡಾ|| ಆರ್. ಎನ್, ಪಾಟೀಲ, ಬಿ. ಎಸ್. ಗೋರೋಶಿ, ಬಿ. ಬಿ. ಬೆಳಕೂಡ, ಬಿ. ಎಸ್. ಕಡಾಡಿ, ಎಸ್. ಬಿ. ಜಗದಾಳಿ, ಎಸ್ ಎಂ. ಖಾನಾಪೂರ, ಎಂ. ಎಸ್. ಕಪ್ಪಲಗುದ್ದಿ, ಶ್ರೀಮತಿ ಬಾಳವ್ವ ಬ. ಕಂಕಣವಾಡಿ, ಎಂ. ಡಿ. ಕುರಬೇಟ, ಬಿ. ಕೆ. ಗೋರೋಶಿ, ಶ್ರೀಮತಿ ಮಲ್ಲವ್ವಾ ಎಸ್. ಹೆಬ್ಬಾಳ, ಎಸ್. ಆರ್. ಮರಗನ್ನವರ, ಎನ್.ಆರ್. ಪಾಟೀಲ ಸ್ವತಂತ್ರ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ
ವ್ಹಿ.ಬಿ. ಪಂಡಿತ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.