ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ ಸಿಂದಗಿ ತಾಲೂಕು ಘಟಕದ ವತಿಯಿಂದ ಅ.1 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಾಂಗಲ್ಯ ಭವನದಲ್ಲಿ ನೂತನ ಅಧ್ಯಕ್ಷರ, ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಕಾರಣ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರಂಗಮಠದ ಪೀಠಾಧಿಪತಿ ಷ. ಬ್ರ. ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಮನಗೂಳಿ ಆಶ್ರಮದ ಪೀಠಧಿಕಾರಿ ಪ. ಪೂ. ಡಾ. ಫೈರೋಜ ಹುಸೇನಿ, ಊರನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಬೋರಗಿ- ಪುರದಾಳ ವಿಶ್ವರಾಧ್ಯ ಮಠದ ಪೂಜ್ಯರಾದ ಶ್ರೀ ಶ್ರೀ ಶ್ರೀ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಸಿಂದಗಿ ಬುದ್ಧ ವಿಹಾರದ ಪೂಜ್ಯ ಭಂತೆ ಸಂಘಪಾಲ ಹಾಗೂ ಯಂಕಂಚಿ ಹಿರೇಮಠದ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯರು ಧಿವ್ಯ ಸಾನ್ನಿಧ್ಯ ವಹಿಸುವರು.
ಶಾಸಕ ರಮೇಶ ಭೂಸನೂರ ಹಾಗೂ ವಿಪ ಸದಸ್ಯ ಹಣಮಂತ ನಿರಾಣಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸುವರು. ಹಿರಿಯ ಹಾಗೂ ಮಕ್ಕಳ ಸಾಹಿತಿ ಹ. ಮ. ಪೂಜಾರ ಸಾಹಿತ್ಯ ಚಟುವಟಿಕೆಗೆ ಚಾಲನೆ ನೀಡುವರು. ಮಾಜಿ ವಿಪ ಸದಸ್ಯ ಅರುಣ ಶಹಾಪುರ ಪುಸ್ತಕ ಬಿಡುಗಡೆಗೊಳಿಸುವರು. ಮಾಜಿ ಶಾಸಕ ಶರಣಪ್ಪ ಸುಣಗಾರ ನಾಡ ದ್ವಜಾರೋಹಣ ನೆರವೇರಿಸುವರು. ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ (ಸೋಮಜ್ಯಾಳ) ನಾಡ ದೇವತೆಗೆ ಪುಷ್ಪಾರ್ಚನೆ ಮಾಡುವರು. ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ( ಮಾಗಣಗೇರಿ) ಕಥಾ ಸಂಕಲನ ಲೋಕಾರ್ಪಣೆ ಮಾಡುವರು. ಉದ್ಯಮಿ ಅನಿಲಗೌಡ ಬಿರಾದಾರ, ಬಿಜೆಪಿ ಧುರೀಣರಾದ ಶ್ರೀಶೈಲಗೌಡ ಬಿರಾದಾರ ದಾಸೋಹ ಮನೆ ಉದ್ಘಾಟಿಸುವರು. ಕಾಂಗ್ರಸ್ ಮುಖಂಡ ಗುರಣ್ಣಗೌಡ ಪಾಟೀಲ್, ಎಮ್. ಎನ್. ಪಾಟೀಲ್, ಎಸ್. ಎಮ್ ಪಾಟೀಲ್ (ಗಣಿಹಾರ), ಎಮ್. ಆರ್. ತಾಂಬೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳುರ, ಪುರಸಭೆ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಸಾಹಿತಿ ಡಾ. ಸುಮಾ ನಿರಣಿ, ವಿಜಯಪುರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಹಾದೇವ ರೇಬಿನಾಳ, ಕಸಾಪ ಸದಸ್ಯ ಅಭಿಷೇಕ ಚಕ್ರವರ್ತಿ, ಎಲೈಟ್ ಶಿಕ್ಷಣ ಸಂಸ್ಥೆಯ ಸಂಚಾಲಕ ಮಹಿಬೂಬ ಅಸಂತಾಪುರ, ಎಚ್. ಜಿ. ಪ. ಪೂ. ಕಾಲೇಜಿನ ಪ್ರಾಚಾರ್ಯ ಎ. ಆರ್. ಹೆಗ್ಗಣದೊಡ್ಡಿ, ಪಿ. ಇ. ಎಸ್. ಪದವಿ ಕಾಲೇಜು ಪ್ರಚಾರ್ಯ ಗುರು ಕಡಣಿ, ಜಿ. ಪಿ ಪೋರವಾಲ್ ಕಾಲೇಜ್ ಪ್ರಚಾರ್ಯ ಡಿ. ಎಂ. ಪಾಟೀಲ್, ದೈಹಿಕ ನಿರ್ದೇಶಕ ರವಿ ಗೋಲಾ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಅಧ್ಯಕ್ಷರುಗಳಿಗೆ, ಉದ್ಯಮಿಗಳಿಗೆ, ಸಾಹಿತಿಗಳಿಗೆ ಹೃದಯಸ್ಪರ್ಶಿ ಸನ್ಮಾನ ಮಾಡಲಾಗುವುದು. ತಾಲೂಕು ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕಸಾಪ ಪತ್ರಿಕಾ ಪ್ರತಿನಿಧಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.