ಗೋಕಾಕ – ತಾಲ್ಲೂಕಿನ ಶಿಂದಿಕುರುಬೇಟ ಗ್ರಾಮದಲ್ಲಿ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಅವರು ಭಗಿರಥ ನಗರ ನಾಮಫಲಕ ಪೂಜೆ ಮಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಹಿರಿಯರಾದ ವಿಠ್ಠಲ ಬೆಳಗಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಅಧ್ಯಕ್ಷರಾದ ಭೀಮಶಿ ಬೆಳಗಲಿ, ಯಮನಪ್ಪ ಹೊನಕುಪ್ಪಿ, ಬಡಪ್ಪಾ ಬಂಡಿವಡ್ಡರ, ಪ್ರಕಾಶ ಬಿರನಾಳಿ, ಹಾಲಪ್ಪ ಗದಾಡಿ, ಸೋಮಲಿಂಗ ಬಂಬಲಾಡಿ, ಸಿದ್ರಾಮ ಇಂಗ್ಲಿ, ಶಶಿಕಾಂತ ಪವಾರ, ಸತೀಶ ಕೋಳಿ, ಮೊಶಿನ ಸೌದಗರ, ಹನುಮಂತ ಸೌತಿಕಾಯಿ, ಲಕ್ಕಪ್ಪ ಬೆಳಗಲಿ, ಸದಾಶಿವ ಬೆಳಗಲಿ ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಅವರನ್ನು ಸನ್ಮಾನಿಸಲಾಯಿತು.