‘ನಮ್ಮ ನೆಲ ನಮ್ಮ ದೇಶ’ ಅಭಿಯಾನದ ಉದ್ಘಾಟನೆ

Must Read

ಮೂಡಲಗಿ – ತಾಲೂಕಿನ ಶಿವಾಪುರ (ಹ) ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಮೂಡಲಗಿ ತಾಪಂ ಹಾಗೂ ಶಿವಾಪುರ ಗ್ರಾಪಂ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ನಮ್ಮ ನೆಲ ನಮ್ಮ ದೇಶ, ಮನರೇಗಾ-ಮಹಿಳೆಯರು ಹಾಗೂ ಪಂಚ ಪ್ರಜಾ ಆಸ್ತಿ ಅಭಿಯಾನದ ಕಾರ್ಯಕ್ರಮವನ್ನು ಮಂಗಳವಾರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಣ್ಣು ಸಂಗ್ರಹ, ಸಸಿ ನೆಡುವುದು, ಶಿಲಾ ಫಲಕ ಅನಾವರಣ, ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬವನ್ನು ಸನ್ಮಾನಿಸಿ ಮಾತನಾಡಿದ ಕಡಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ. ತ್ಯಾಗ, ಬಲಿದಾನ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ನಾವು ಮರೆಯುತ್ತಿದ್ದೇವೆ. ಸ್ವಾತಂತ್ರ್ಯ ಆಚರಣೆ ಮಾಡುವ ಸಂದರ್ಭದಲ್ಲಿ ನೆನೆಪು ಮಾಡಿಕೊಳ್ಳಬೇಕಿದೆ. ನಮ್ಮ ದೇಶಕ್ಕೆ ಬ್ರಿಟಿಷರು ವ್ಯಾಪಾರ ಮಾಡಲು ಬಂದಿದ್ದರು. ಫಲವತ್ತಾದ ಮಣ್ಣು, ಮುತ್ತು ರತ್ನಗಳನ್ನು ತುಂಬಿಕೊಂಡು ಸಂಪತ್ತು ಭರಿತ ನಾಡಾಗಿತ್ತು. ಇದನ್ನು ಕಂಡು ಬ್ರಿಟಿಷರು ನಮ್ಮ ದೇಶವನ್ನು ಆಳಿ ಲೂಟಿ ಮಾಡಿದರು. ಅವರನ್ನು ದೇಶದಿಂದ ತೊಲಗಿಸಲು ದೇಶಾದ್ಯಂತ ಹೋರಾಟ ಮಾಡಿದ್ದಾರೆ. ಆವತ್ತು ದೇಶಕ್ಕಾಗಿ ಕಷ್ಟಪಟ್ಟು ಸ್ವಾತಂತ್ರ್ಯ ಪಡೆದಿದ್ದಾರೆ. ನಮ್ಮ ಸೈನಿಕರು ಜೀವ ಹಂಗು ತೊರೆದು ಹೋರಾಟ ಮಾಡುವುದರಿಂದ ನಾವು ಆರಾಮ ಇದ್ದೇವೆ. ನಮ್ಮ ನೆಲ ನಮ್ಮ ದೇಶದ ಮೇಲೆ ಅಭಿಮಾನ ಇರಬೇಕು ಎಂದು ತಿಳಿಸಿದರು. 

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಮೇರಿ ಮಿಟ್ಟಿ ಮೇರಾ ದೇಶ ಕಾರ್ಯಕ್ರಮದಿಂದ 7500 ಗಿಡ ಬೆಳೆಸುವುದು. ದೇಶದ ಎಲ್ಲೆಡೆಯಿಂದ ತಂದಿರುವ ಮಣ್ಣು ಸಂಗ್ರಹಿಸಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಜಗತ್ತಿಗೆ ಸ್ಪರ್ಧೆ ನೀಡುವಂತಹ ವಿಮಾನ ನಿಲ್ದಾಣಗಳು ನಮ್ಮ ದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವಂತಹ ಯೋಜನೆ, ಸಾವಿರಾರು ಕಿಮೀ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಳಿಗಳು ನಿರ್ಮಿಸಲಾಗಿದೆ. ದೇಶದ ಕ್ರಾಂತಿಕಾರಿ ಬದಲಾವಣೆಗೆ ಸಾರ್ವಜನಿಕರ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದರು. 

ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಫ್.ಜಿ.ಚಿನ್ನನವರ, ಸಹಾಯಕ ನಿರ್ದೇಶಕರಾದ (ಗ್ರಾಉ) ಸಂಗಮೇಶ ರೊಡ್ಡನ್ನವರ ಮಾನ್ಯ ಸಹಾಯಕ ನಿರ್ದೇಶಕರು (ಪಂರಾ) ಚಂದ್ರಶೇಖರ ಬಾರ್ಕಿ, ತಾಂತ್ರಿಕ ಸಂಯೋಜಕರಾದ ನಾರ್ಗಾಜುನ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಬಲಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಎಸ್ ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಂತ್ರಿಕ ಸಹಾಯಕರು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು, ಶಾಲಾ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group