ಜ.8ರಂದು ಇಟ್ನಾಳದಲ್ಲಿ ಶಾಲಾ ಕಟ್ಟಡ ಉದ್ಘಾಟಣೆ

Must Read

ಮೂಡಲಗಿ: ಸಮೀಪದ ಇಟ್ನಾಳ ಗ್ರಾಮದಲ್ಲಿನ ಶಾಂತಿ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಪ್ರಾಥಮಿಕ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಹಾಗೂ ಶ್ರೀಮತಿ ರತ್ನವ್ವ ಮತ್ತು  ಅಪ್ಪಯ್ಯಾ ತೇರದಾಳ ದಂಪತಿಗಳ 50ನೇ ವಿವಾಹವಾರ್ಷಿಕೋತ್ಸವ ಹಾಗೂ ಅಕ್ಷರ ತುಲಾಭಾರ ಸಮಾರಂಭ ಸೋಮವಾರ ಜ.೮ ರಂದು ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.೮ ರಂದು ಮುಂಜಾನೆ ಗಣಪತಿ ಹಾಗೂ ಗೋ ಮಾತೆ ಪೂಜೆಯೊಂದಿಗೆ ಹೋಮ ನೆರವೇರುವುದು, ೧೦ ಗಂಟೆಗೆ ಪಲ್ಲಕ್ಕಿ ಉತ್ಸವ, ೧೧.೨೫ಕ್ಕೆ ಶಾಲಾ ಉದ್ಘಾಟನಾ ಸಮಾರಂಭ ಜರುಗುವುದು.

ಸಮಾರಂಭದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ, ಹನಮಾಪೂರದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಕಾಮನಕೇರಿಯ ಶ್ರೀ ಪರಮಾನಂದ ಮಹಾರಾಜರು, ಇಟನಾಳದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗೋಪಾಲ ಅ.ತೇರದಾಳ ವಹಿಸುವರು, ಬೆಳಗಾವಿ ಎಸ್.ಪಿ ಡಾ.ಭೀಮಾಶಂಕರ ಎಸ್.ಗುಳೇದ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಸಿಂಧನೂರ ಪ್ರಧಾನ ದಿವಾಣಿ ನ್ಯಾಯಾಧೀಶರಾದ  ಕೆ.ಬಿ.ಮನಗುತ್ತಿ, ಇಂಡಿ ಸಿವಿಲ್ ನ್ಯಾಯಾಧೀಶರಾದ ಈಶ್ವರ ಎಸ್.ಎಮ್., ಚಿಕ್ಕೋಡಿ ಅಬಕಾರಿ ಇಲಾಖೆಯ ಡಿ.ಸಿ ಕೆ.ಅರುಣಕುಮಾರ, ಬಾಗಲಕೋಟ ಅಬಕಾರಿ ಇಲಾಖೆಯ ಡಿಸಿ ಶಿವಲಿಂಗ ಬನಹಟ್ಟಿ, ಚಿಕ್ಕೋಡಿ ಶಿಕ್ಷಣ ಇಲಾಖೆಯ ಡಿಡಿಪಿಐ ಮೋಹನಕುಮಾರ ಹಂಚಾಟೆ  ಮತ್ತು ಅತಿಥಿಗಳಾಗಿ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು ಭಾಗವಹಿಸುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group