ಬೀದರ – ಜಿಲ್ಲೆಯ ಹುಮ್ನಾಬಾದ್ ನಗರದಲ್ಲಿ ಫಾಸ್ಟ್ ಪುಡ್ ಮಾಲೀಕ ಹಾಗೂ ಹಿಂದೂ ಕಾರ್ಯಕರ್ತ ಬಲರಾಮ್ ಮೇಲೆ ಮುಸ್ಲಿಮ್ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿ, ಹೋಟೆಲ್ ಸಾಮಗ್ರಿಗಳನ್ನು ಲೂಟಿ ಮಾಡುವ ಜೊತೆಗೆ ಉದ್ದೇಶಪೂರ್ವಕವಾಗಿ ಹೋಟೆಲ್ ನಲ್ಲಿದ್ದ ಶಿವಾಜೀ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ ಎಂದು ಆಂದೋಲನ ಶ್ರೀಗಳು ಆರೋಪಿಸಿದ್ದಾರೆ.
ಸುಮಾರು ಇಪ್ಪತ್ತು ಜನರಿದ್ದ ತಂಡವು ಈ ಕೃತ್ಯ ನಡೆಸಿದ್ದು ಪೊಲೀಸರು ನಾಮ್ ಕೆ ವಾಸ್ತೆ ಇಬ್ಬರನ್ನು ಬಂಧಿಸಿದ್ದಾರೆ ಉಳಿದವರನ್ನು ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ಹುಮನಾಬಾದ್ ನಗರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹಿಂದೂ ಕಾರ್ಯಕರ್ತನ ಮೇಲಿನ ಹಲ್ಲೆಗೆ ಆಂದೋಲನ ಶ್ರೀಗಳು ವಿಡಿಯೋ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದ್ದು ಆದರೂ ಹುಮನಾಬಾದ್ ಪೊಲೀಸರು ನಾಮ ಕಾ ವಾಸ್ಥೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಉಳಿದ ಮುಸ್ಲಿಂ ಗೂಂಡಾಗಳನ್ನು ಬಂಧಿಸದೆ ಹುಮ್ನಾಬಾದ್ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಈ ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಇಲ್ಲದೆ ಇದ್ರೆ ಹುಮ್ನಾಬಾದ್ ಬಂದ್ ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹುಮ್ನಾಬಾದ್ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ