ಭಾರತವಿಂದು ಜಾಗತಿಕವಾಗಿ ಪ್ರಾಬಲ್ಯ ಮೆರೆಯುತ್ತಿದೆ – ರಮೇಶ ಭೂಸನೂರ

Must Read

ಸಿಂದಗಿ– ರೂ 93 ಕೋಟಿ ವೆಚ್ಚದಲ್ಲಿ ಪಟ್ಟಣದ ಪ್ರತಿ ಮನೆ ಮನೆಗೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು. ಒಂದು ವರ್ಷದ ಅವಧಿಯಲ್ಲಿ ಸಿಂದಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಬುಧವಾರ ಹಮ್ಮಿಕೊಂಡಿರುವ 73 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮತನಾಡಿದರು.

73 ವರ್ಷದ ಅವಧಿಯಲ್ಲಿ ಭಾರತವು ಹಲವು ಏರಿಳಿತಗಳನ್ನು  ಕಂಡಿದೆ. ಗುಲಾಮಗಿರಿಯಿಂದ ಹೊರಬಂದು ಎಲ್ಲ ರಾಷ್ಟ್ರಗಳಂತೆ ಭಾರತವು ಅನೇಕ ಸವಾಲುಗಳನ್ನು ಎದುರಿಸಿದೆ. ಇಂದು ಜಾಗತಿಕ ಮಟ್ಟದಲ್ಲಿ ಬಾರತ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಅಪಾರ ಮಾನವ ಸಂಪನ್ಮೂಲ ಪಡೆದಿರುವ ಭಾರತ ಅದಕ್ಕಾಗಿ ಅಗತ್ಯ ಹೋರಾಟಗಳನ್ನು ಮಾಡಿದೆ. ಹೆಜ್ಜೆಯಿಂದ ಹೆಜ್ಜೆಗೆ ಮುಂದಕ್ಕೆ ಸಾಗಿರುವುದು ದೊಡ್ಡ ಸಾಧನೆಯೇ ಆದರೂ ಸಂಪೂರ್ಣ ತೃಪ್ತಿಯನ್ನು ತಲುಪದೆ ಇನ್ನೂ ಹೋರಾಟದ ಹಾದಿಯಲ್ಲಿ ಮುನ್ನಡೆಯಬೇಕಾದುದು ಭಾರತದ ಇಂದಿನ ಸವಾಲಾಗಿದೆ. ಬಡತನ, ಅನಕ್ಷರತೆ ರೋಗರುಜಿನ, ನಿರುದ್ಯೋಗದಂಥ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಭಾರತ ಪ್ರಗತಿ ಪಥದಲ್ಲಿ ಸಾಗಿದೆ. ಹಸಿರು ಕ್ರಾಂತಿ ಕ್ಷೀರಕ್ರಾಂತಿ ಗಳ ಮೂಲಕ ನಮ್ಮ ದೇಶವು ತನ್ನ ಸತ್ವವನ್ನು ತುಂಬಿಕೊಳ್ಳುತ್ತಲೇ ಹೊರಟಿದೆ.

ಭಾರತ ಏಷ್ಯಾ ಖಂಡದ ಬಹುದೊಡ್ಡ ರಾಷ್ಟ್ರ. ಜಗತ್ತಿನ ಅತಿ ಬಲಿಷ್ಠ ಪ್ರಜಾಪ್ರಭುತ್ವ ದೇಶ. ಸಾಧಕರ ಕರ್ಮಭೂಮಿ. ಸಾಧು-ಸಂತರ ಪುಣ್ಯಭೂಮಿ. ಶಾಂತಿ ಸೌಹಾರ್ದತೆ ನೆಲೆಬೀಡು. ಅನೇಕತೆಯಲ್ಲಿ ಏಕತೆ ಭಾರತದ ವೈಶಿಷ್ಟ್ಯ ಸರ್ವ ಜಾತಿ ಮತ ಧರ್ಮ ಪಂಥೀಯರು ಕೂಡಿಬಾಳುವ ಅಪರೂಪದ ನೆಲ. ನಾವೆಲ್ಲರೂ ಒಂದೇ ಮತ ಒಂದೇ ಧರ್ಮ ನಾವು ಮನುಜರು ಎಂಬ ಎಂಬುದು ವಿಶ್ವಕ್ಕೆ ಭಾರತೀಯರು ನೀಡಿರುವ ದಿವ್ಯ ಸಂದೇಶ. ಕ್ಷಮಿಸುವ, ಬಿಗಿದಪ್ಪಿ ಮನ ಪರಿವರ್ತಿಸುವ ಗುಣ ಈ ನೆಲದ ವಿಶೇಷ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸೂತ್ರವನ್ನು ಪಾಲಿಸಿಕೊಂಡು ಬಂದಿರುವ ಹಿರಿಮೆ ನಾಡಿನದು, ಸಾಮಾಜಿಕ ನ್ಯಾಯಕ್ಕೆ ಸದಾ ಹೆಸರುವಾಸಿ ಸರ್ವರಿಗೂ ಸಮಪಾಲು ಸಮಬಾಳು ಎನ್ನುವುದು ಈ ದೇಶದ ಮೂಲ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜೀವಕುಮಾರ ದಾಸರ ಪ್ರಸ್ತಾವಿಕವಾಗಿ ಮಾತನಾಡಿದರು. ಲಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಅಲ್ಲಾಪೂರ, ಅಶೋಕ ತೆಲ್ಲೂರ, ಮುಖ್ಯಾಧಿಕಾರಿ ಪ್ರಕಾಶ ಮುದಗೋಳಕರ, ಪುರಸಭೆಯ ಉಪಾಧ್ಯಕ್ಷ ಹಾಸಿಂ ಆಳಮದ , ಬಿಇಓ ಎಚ್.ಎಮ್.ಹರನಾಳ, ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group