ಬೆಳಗಾವಿ: ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ನಡುವೆ ಡಿಸೆಂಬರ್ 20 ರಿಂದ ತನ್ನ ಬೆಳಗಿನ ವೇಳೆಯ ವಿಮಾನ ಸಂಚಾರವನ್ನು ಪುನರಾರಂಭ ಮಾಡುತ್ತಿರುವುದು ಸಂತೋಷದ ವಿಷಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ನಡುವೆ ಅಕ್ಟೋಬರ್ 28, 2024 ರಂದು ವಿಮಾನಗಳ ಕೊರತೆಯಿಂದಾಗಿ ಬೆಳಗಿನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ನನ್ನ ಮನವಿಯ ಮೇರೆಗೆ ಪುನರಾರಂಭಿಸಲು ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ನಿರ್ಧರಿಸಿರುವುದು ಸ್ವಾಗತಾರ್ಹ. ಈ ವಿಮಾನ ಸಂಚಾರ ವಾರದ ಪ್ರತಿ ದಿನವೂ ಲಭ್ಯವಿರುತ್ತವೆ ಮತ್ತು ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
ಬೆಳಗಾವಿ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ವ್ಯಾಪಾರಿಗಳು, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಸೇವೆಯನ್ನು ಪುನರಾರಂಭ ಮಾಡಲಾಗಿದೆ. ಈ ವಿಮಾನಯಾನ ಸೇವೆ ಸೌಲಭ್ಯವನ್ನು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಹಾಗೂ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಗೆ ಜಿಲ್ಲೆಯ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ವಿಮಾನ ವೇಳಾಪಟ್ಟಿ: ಡಿಸೆಂಬರ 20 2024 ರಿಂದ
ವಿಮಾನ 6ಇ-7285: ಬೆಂಗಳೂರಿನಿಂದ ಬೆಳಗಾವಿಗೆ ಬೆಳಗ್ಗೆ 6:30ಕ್ಕೆ ಹೊರಟು, 8:10ಕ್ಕೆ ತಲುಪಲಿದೆ
ವಿಮಾನ 6ಇ-7286: ಬೆಳಗಾವಿಯಿಂದ ಬೆಂಗಳೂರಿಗೆ ಬೆಳಗ್ಗೆ 8:30ಕ್ಕೆ ಹೊರಟು, 10:00 ಗಂಟೆಗೆ ತಲುಪಲಿದೆ
ಪೋಟೋ: ಶಿರ್ಷಿಕೆ: ಬೆಳಗಾವಿ: ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದ್ದರು.