ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಸ್ಥೆ – ಮಲ್ಲಿಕಾರ್ಜುನ ಚೌಕಶಿ ಆರೋಪ

Must Read

ಬೆಳಗಾವಿ ಡಿಸಿಸಿ ಬ್ಯಾಂಕಿನ ಗ್ರಾಹಕರ ಸಿಬಿಲ್ ಸ್ಕೋರ್ ಬಗ್ಗೆ ಸಿಬಿಲ್ ಗೆ ಸರಿಯಾಗಿ ಮಾಹಿತಿ ಕೊಡದೇ ಇದ್ದದ್ದರಿಂದ ಸಾಲಗಾರರ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಿದೆ. ಇದಕ್ಕೆ ಡಿಸಿಸಿ ಬ್ಯಾಂಕ್ ಸಿಬ್ಬಂದಿಯ ಅಲಕ್ಷ್ಯತನವೇ ಕಾರಣ ಎಂದು ಕೃಷಿಕ ಹಾಗೂ ವಕೀಲ ಮಲ್ಲಿಕಾರ್ಜುನ ಚೌಕಶಿ ಹೇಳಿದ್ದಾರೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಯಾವ ಘಳಿಗೆಯಲ್ಲಿ ಹಿಂದಿನ ಚೇರಮನ್ ರಮೇಶ ಕತ್ತಿಯವರು ರಾಜೀನಾಮೆ ಕೊಡುವಂತೆ ಮಾಡಿದರೋ ಅಂದಿನಿಂದ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ದುರ್ದೆಸೆ ಆರಂಭವಾಗಿದೆ. ಕೃಷಿಯೇತರ ಸಾಲಕ್ಕೆ ಸಿಬಿಲ್ ಲಿಂಕ್ ಇತ್ತು. ಈಗ ನಿಯಮಿತವಾಗಿ ಸಾಲ ತುಂಬಲಾಗುತ್ತಿದ್ದರೂ ಸಿಬಿಲ್ ಗೆ ಮಾಹಿತಿ ನೀಡದೆ ಸಾಲಗಾರರ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಿದೆ. ಬ್ಯಾಂಕ್ ಸಿಬ್ಬಂದಿಗೆ ತರಬೇತಿಯಾದರೂ ನೀಡಬೇಕು ಅದು ಇಲ್ಲದೆ ಸಾಲಗಾರರು ತುಂಬಿರುವ ಸಾಲವನ್ನು ಬೇರೆ ಖಾತೆಗಳಿಗೆ ವರ್ಗಾಯಸಿಕೊಂಡು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೂಡಲೇ ಸರ್ಕಾರ ಹಾಗೂ ಆರ್ ಬಿಐ ಹಾಗೂ ಸಹಕಾರ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಆದ ತೊಂದರೆಯನ್ನು ಸರಿಪಡಿಸಬೇಕು ಇಲ್ಲವಾದರೆ ಆಡಳಿತ ಮಂಡಳಿಯ ವಿರುದ್ಧ ದೂರು ನೀಡಲಾಗುವುದು ಹಾಗೂ ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ಮಾಡಲಾಗುವುದು ಎಂದು ಚೌಕಶಿ ಎಚ್ಚರಿಕೆ ನೀಡಿದ್ದಾರೆ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group