ಸವದತ್ತಿ ತಾಲೂಕು ಸಿಂದೋಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಲಿಕಲಿ ತರಗತಿ ಚಟುವಟಿಕೆಗಳನ್ನು ಬಳಸಿ ಬೋಧನೆ ಮಾಡುತ್ತಿರುವ ಎಲೆಮರೆಯ ಕಾಯಿಯಂತಿರುವ ಶಿಕ್ಷಕಿ ಅನಸೂಯಾ ಮದನಬಾವಿ.
ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಸಂಯೋಜನೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಆಲೋಚನೆ ಮಾಡಿ ನನ್ನ ಮಾರ್ಗದರ್ಶಕ ಶಿಕ್ಷಕರಾದ ವೈ ಬಿ ಕಡಕೋಳ ಅವರಿಗೆ ಪೋನ್ ಮಾಡಿ ಒಬ್ಬ ಶಿಕ್ಷಕಿಯ ಹೆಸರು ಹೇಳುವಂತೆ ಕೇಳಿದಾಗ ಅವರ ಚಟುವಟಿಕೆಗಳನ್ನು ಹಾಗೂ ಮಕ್ಕಳ ಜೊತೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೈಗೊಂಡ ನೃತ್ಯ ರೂಪಕಗಳ ವಿಡಿಯೋ ಕಡಕೋಳ ಸರ್ ಕಳಿಸಿದಾಗ ಸಂತಸ ಎನಿಸಿತು.
ಆಗ ಅನಸೂಯಾ ಅವರ ಜೊತೆ ಮಾತಾಡಿ ಅವರ ಪರಿಚಯ ಮಾಡಿಕೊಂಡು ಅವರ ಕಿರು ಪರಿಚಯ ರೂಪಿಸಿದೆ.
ಪುರಾಣ ಇತಿಹಾಸದಲ್ಲಿ ಅನಸೂಯೆ ಎಂಬ ಹೆಸರು ಬರುತ್ತದೆ ಆ ಅನಸೂಯಾ ಕರ್ದಮ ಮುನಿ ಹಾಗೂ ದೇವಹೂತಿಯರ ಮಗಳು. ಅತ್ರಿ ಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನು ಮಕ್ಕಳನ್ನಾಗಿಸಿ, ತೊಟ್ಟಿಲಲ್ಲಿಟ್ಟು ತೂಗಿ, ಸರಸ್ವತಿ, ಲಕ್ಷ್ಮೀ, ಪಾರ್ವತಿಯರನ್ನು ಕಂಗಾಲುಗೊಳಿಸಿದವಳು. ನಂತರ ಅವರನ್ನು ಮೆಚ್ಚಿಸಿ ವರ ಪಡೆದು, ದತ್ತಾತ್ರೇಯ, ದೂರ್ವಾಸ, ಚಂದ್ರರೆಂಬ ಮೂವರು ಮಕ್ಕಳನ್ನು ಹೆತ್ತಳು. ಶ್ರೀರಾಮನ ಅರಣ್ಯವಾಸದಲ್ಲಿ ಸೀತೆಗೆ ಈಕೆ ಮಾಂಗಲ್ಯವೃದ್ಧಿಯ ಧರ್ಮರಹಸ್ಯಗಳನ್ನು ತಿಳಿಸಿದಳು.
ಈ ಹೆಸರು ಹೊಂದಿರುವ ನಾನು ಪರಿಚಯ ಮಾಡ ಹೊರಟ ಅನಸೂಯಾ ಮೂಲತಃ ಬೈಲಹೊಂಗಲ ತಾಲೂಕ ಮೇಕಲಮರ್ಡಿಯವರು….ಇವರ ತಂದೆ ಶಂಕರಪ್ಪ ತಾಯಿ ಫಕ್ಕೀರವ್ವ ಈ ಶರಣ ದಂಪತಿಗಳ ಚೊಚ್ಚಲ ಮಗಳು ಅನಸೂಯಾ.ತಾಯಿ ಪ್ರೀತಿಯಿಂದ ಕರೆಯುವ ಹೆಸರು.
*ಶಿಕ್ಷಣ* –
ಇವರ 1ರಿಂದ 10ನೇ ತರಗತಿ ಶಿಕ್ಷಣ ಜರುಗಿದ್ದು ಮೇಕಲಮರಡಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ಇವರ ಮುಂದಿನ ಶಿಕ್ಷಣ ಪಿ ಯುಸಿ ಕಲಾ ವಿಭಾಗದಲ್ಲಿ ನಂತರ ಡಿಈಡಿ ಕೂಡ. ಇಂಚಲ ಶಿವಯೋಗಿಶ್ವರ ಸಂಸ್ಥೆಯ ಕಾಲೇಜಿನಲ್ಲಿ ಆಯಿತು.
*ಸೇವೆ*
ಕಲಿತು ಬಹಳ ದಿನಗಳ ಕಾಲ ಕೂಡದೇ ನೌಕರಿ ಮಾಡುವ ಅವಕಾಶ ಇವರ ಪಾಲಿಗೆ ಬಂದು 23-06-2010 ರಂದು ಸೇವೆಗೆ ಸೇರಿದ್ದು ಖಾನಾಪುರ ತಾಲೂಕ ತೀರ್ಥಕುಂಡೆ, ಬೆಳಗಾವಿ ಜಿಲ್ಲೆಯ ಮಲೆನಾಡಿನ ಪರಿಸರದಲ್ಲಿ. ಅಲ್ಲಿ ಮಕ್ಕಳ ಜೊತೆ ಮಗುವಾಗಿ ಶಿಕ್ಷಣ ನೀಡುತ್ತಿದ್ದ ಇವರು
ನಂತರ ಅದೇ ತಾಲೂಕಿನ ಜಾಂಬೊಟಿಯಲ್ಲಿ ಇಲ್ಲಿ, ಮರಾಠಿ ಮಕ್ಕಳಿಗೆ ಕನ್ನಡ ಕಲಿಸುವಲ್ಲಿ ಸಾಕಷ್ಟು, ಹೊಸ, ಹೊಸ ಪ್ರಯತ್ನಗಳು.. ಅಲ್ಲಿರುವ ಮಕ್ಕಳಿಗೆ, ಪಾಲಕರಿಗೆ ಕನ್ನಡ ಕಲಿಯುವದು ತುಂಬಾ ಆಸಕ್ತಿ.. ಪ್ರೋತ್ಸಾಹ ತುಂಬಾ ಇತ್ತು.. ಖಾನಾಪುರದಲ್ಲಿ ನಲಿ -ಕಲಿ ಸಂಪನ್ಮೂಲ ವ್ಯಕ್ತಿ ಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಇವರದಾಯಿತು…
*ವೈವಾಹಿಕ ಜೀವನ* 2016ರಲ್ಲಿ ಸವದತ್ತಿ ತಾಲೂಕಿನ ಬಸರಗಿ ಗ್ರಾಮಕ್ಕೆ ಬಂದು.. ಇಲ್ಲಿಯೂ 7ವರ್ಷಗಳ ಕಾಲ ನಲಿ -ಕಲಿಯಲ್ಲಿ ಸೇವೆ ಸಲ್ಲಿಸಿ.. ನಲಿ -ಕಲಿ ಉತ್ತಮ ಶಿಕ್ಷಕಿಯಾಗಿ ಪ್ರಶಸ್ತಿ ಗೌರವ 2019-2020 ರಲ್ಲಿ ಇವರಿಗೆ ದೊರೆಯಿತು… ಇವರ ಸ್ವಭಾವ ವರ್ಗ ಕೋಣೆ ಮತ್ತು ಮಕ್ಕಳ ಜೊತೆ ಇರುವದು ಅಂದ್ರೆ ಪಂಚಪ್ರಾಣ….ಸಾಕಷ್ಟು ನಾವಿನ್ಯಯುತ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಹೊಸ, ಹೊಸ ತಂತ್ರ ಬಳಸಿ ಭೋದನೆ ಮಾಡುವದು.. ಇವರ ಕಲೆ ಆಗಿತ್ತು..
*ಸಹೃದಯಿ*
ಬಡ ಮಕ್ಕಳಿಗೆ ನೋಟ್ ಪುಸ್ತಕ.ಪೆನ್, ಪೆನ್ಸಿಲ್.. ಆದಷ್ಟು ಅವರಿಗೆ ಸಹಾಯ ಮಾಡೋದು…. ಎಲ್ಲರೂ ನಮ್ಮವರು, ಹಿರಿಯ, ಕಿರಿಯ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ಬೇರೆಯವದು ಇವರ ಹವ್ಯಾಸ.. ಯಾವದೇ ಕೆಲಸ ಕೊಟ್ಟರೂ.. ಅದನ್ನು ಮಾಡಿಯೇ ತೀರೋದು.. ನೇರವಾದ ಮಾತು.. ಸತ್ಯಕ್ಕೆ ಬೆಲೆ ಕೊಡೋದು ಇವರ ಹುಟ್ಟುಗುಣ.. ಈ ಎಲ್ಲಾ ಗುಣಗಳನ್ನು ಮೆಚ್ಚಿ.. ನಮ್ಮ ಅರಟಗಲ್ ಕ್ಲಸ್ಟರ್ ನ ಎಲ್ಲಾ ಶಿಕ್ಷಕರ ಬಳಗ ಇವರನ್ನು.2020 ಡಿಸೆಂಬರನಲ್ಲಿ . ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ. ಸವದತ್ತಿ ಗೆ ಅವಿರೋಧವಾಗಿ ಆಯ್ಕೆ ಮಾಡಿತಲ್ಲದೇ ತಾಲೂಕು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿದರು…ಮಕ್ಕಳೊಂದಿಗೆ ಮಕ್ಕಳಾಗಿ, ಶಿಕ್ಷಕರೊಂದಿಗೆ ಚಿಕ್ಕ ಸಹೋದರಿಯಾಗಿ.. ಅದರಲ್ಲೂ ಮಹಿಳಾ ಶಿಕ್ಷಕರ ಸಮಸ್ಯೆಗಳು ಏನೇ ಬಂದರೆ ಆ ಸಮಸ್ಯೆ ಪರಿಹರಿಸಲು ಸತತ ಪ್ರಯತ್ನ….ಒಟ್ಟಾರೆ ಮಕ್ಕಳೇ ಇವರಿಗೆ ದೇವರು… “ಅವರಿಂದ ನನಗೆ ಅನ್ನ ಸಿಕ್ಕಿದೆ ಅಂದ ಮೇಲೆ ಅವರಿಗೆ ಅನ್ಯಾಯವಾಗದ ರೀತಿಯಲ್ಲಿ ಕಲಿಸುವ ಪ್ರಯತ್ನ ನನ್ನದು”..
ಎಂದು ಹೆಮ್ಮೆಯಿಂದ ನುಡಿಯುವ ಗುಣ ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಇವರು ಇರಲು ಕಾರಣ.
ಪಡೆದ ಗೌರವ ಸನ್ಮಾನಗಳು
ಅನಸೂಯಾ ಮದನಬಾವಿಯವರು ಪ್ರಚಾರ ಬಯಸಿದವರಲ್ಲ. ಆದರೂ ಇವರ ಸೇವೆಯನ್ನು ಹಲವಾರು ಸಂಘಟನೆಗಳು ಗುರುತಿಸಿವೆ.
1) 2024 ರಲ್ಲಿ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಬೈಲಹೊಂಗಲ ತಾಲೂಕಿನ ಮೇಕಲಮರ್ಡಿಯ ಜಯ ಕರ್ನಾಟಕ ಸಂಘಟನೆ ಯವರು ಡಾ ಪುನೀತ್ ರಾಜಕುಮಾರ್ ಸೇವಾ ಪ್ರಶಸ್ತಿ ನೀಡಿ ಗೌರವಿಸಿರುವರು.
2) 2024 ರಲ್ಲಿ ಸವದತ್ತಿ ತಾಲೂಕು ಸಿಂದೋಗಿಯಲ್ಲಿ ಜರುಗಿದ ಮಕ್ಕಳ ಹಬ್ಬದ ಕ್ರಿಯಾತ್ಮಕ ಚಟುವಟಿಕೆಗಳನ್ನು ಗಮನಿಸಿ ಶಿಕ್ಷಣ ಇಲಾಖೆಯ ಅಭಿನಂದನಾ ಪತ್ರ ಪಡೆದಿರುವರು.
3) 2020 ರಲ್ಲಿ ನಲಿಕಲಿ ತರಗತಿ ನಿರ್ವಹಣೆ ಗಾಗಿ ಉತ್ತಮ ನಲಿ ಕಲಿ ಶಿಕ್ಷಕಿ ಗೌರವ ಕ್ಕೆ ಪಾತ್ರರಾಗಿರುವರು.
4) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿ ಆಯ್ಕೆ ಆಗಿರುವ ಕುರಿತು ಅಭಿನಂದನಾ ಪತ್ರ
5) 2020-21 ನೇ ಸಾಲಿನಲ್ಲಿ ಮುನವಳ್ಳಿ ಯ ವ್ಹಿ.ಪಿ.ಜೇವೂರ ಪ್ರತಿಷ್ಠಾನದವರು ಗೌರವಿಸಿ ಸನ್ಮಾನಿಸಿರುವರು.
6) ಮುನವಳ್ಳಿ ಯ ಪಂಚಲಿಂಗೇಶ್ವರ ಜಾತ್ರಾ ಸಮಿತಿಯವರು 2025 ರ ಜಾತ್ರಾ ಕಾರ್ಯ ಕ್ರಮದಲ್ಲಿ ಮಕ್ಕಳ ನೃತ್ಯ ಪ್ರದರ್ಶನ ಕಾರ್ಯ ಕ್ರಮ ದಲ್ಲಿ ಮಕ್ಕಳೊಂದಿಗೆ ಭಾಗವಹಿಸಿ ದ್ದಕ್ಕೆ ಗೌರವ ಸನ್ಮಾನ ಮಾಡಿರುವರು.
ಹೀಗೆ ಇನ್ನೂ ಹತ್ತು ಹಲವಾರು ಸಂಘಟನೆಗಳು ಇವರ ಕಾರ್ಯ ಕ್ಕೆ ಗೌರವಿಸಿರುವರು. ನನ್ನ ತರಗತಿ ಮಕ್ಕಳ ಗೌರವ ನನಗೆ ಸಿಗುತ್ತದೆ. ಅವರ ಪ್ರೀತಿ ಹೀಗೆ ಇರುವಂತೆ ದೇವರು ಮಕ್ಕಳ ಒಡನಾಡಿಯಾಗಿ ಬದುಕಲು ಶಕ್ತಿ ನೀಡಲಿ ಎಂದು ಇವರು ಪ್ರಾರ್ಥಿಸುವದನ್ನು ನೋಡಿದರೆ ಯಾವ ಪ್ರಶಸ್ತಿ ಗಾಗಿ ಅರ್ಜಿ ಸಲ್ಲಿಸದೇ ಪ್ರಶಸ್ತಿ ಗೌರವ ಇವರಿಗೆ ಸಿಗುತ್ತಿರುವುದು ಇವರ ಪ್ರಾಮಾಣಿಕ ಕರ್ತವ್ಯ ಕ್ಕೆ ಸಾಕ್ಷಿ
ಕೌಟುಂಬಿಕ ಜೀವನ
ಅಂದ ಹಾಗೆ ಇವರ ಕುಟುಂಬದ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕು.ಇವರ ಪತಿ ರಾಜು ಹಟ್ಟಿ ಅಂತ.. ಅಂಚೆ ಕಛೇರಿಯಲ್ಲಿ. ಪೋಸ್ಟಲ್ ಅಸಿಸ್ಟೆಂಟ್.ಹುದ್ದೆ ಗೋಕಾಕ್ ತಾಲೂಕಿನ ಮಮದಾಪುರ.ದಲ್ಲಿ ಸೇವೆ ಸಲ್ಲಿಸುತ್ತಿರುವರು. ಇಬ್ಬರು ಮಕ್ಕಳು ಗಂಡು ಮಗ. ಇಶಾಂತ್ .7ನೇ ತರಗತಿ ಧಾರವಾಡದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಓದುತ್ತಿದ್ದರುವನು. ಮಗಳು. ಸಮೃದ್ಧಿ…4ನೇ ತರಗತಿಯಲ್ಲಿ.. ಮುನವಳ್ಳಿಯ ಶ್ರೀ ರೇಣುಕಾ ಆಂಗ್ಲ ಮಾಧ್ಯಮ ಸಿಬಿಎಸ್ ಸಿ ಶಾಲೆಯಲ್ಲಿ ಓದುತ್ತಿರುವಳು. ಇವರ ಪತಿ ಹನುಮಾನ್ ಭಕ್ತರು. ಪಂಚಮುಖಿ ಹನುಮಂತ ದೇವರ ಪೂಜೆ ಸಲ್ಲಿಸುತ್ತಿರುವರು.
ಸದ್ಯ ಇವರು2023ರಲ್ಲಿ ಬಸರಗಿ ಶಾಲೆಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಗಿ ಶಾಲೆಗೆ ವರ್ಗಾವಣೆ ಮೂಲಕ ಬಂದಿರುವರು. ಇಲ್ಲಿರುವ ಜನರ ಮಕ್ಕಳ ಮನಸು ಗೆಲ್ಲಲು ನನಗೆ ಒಂದು ವರ್ಷ ಬೇಕಾಯಿತು ಎಂದು ಹೇಳುವರು.. ನ್ಯಾಯಯುತವಾಗಿ ಇದ್ದಲ್ಲಿ ಸವಾಲುಗಳು ಜಾಸ್ತಿ ಎನ್ನುವಂತೆ.. ಎಲ್ಲವನ್ನು ಎದುರಿಸುತ್ತಾ.. ಮುಂದೆ ಬರುವವರನ್ನು ಕಾಲ ಎಳೆಯೋ ಜನಗಳ ಮದ್ಯೆ.. ಒಳ್ಳೆಯ ಕೆಲಸ ಮಾಡಲು ಆ ದೇವರು ನನಗೆ ಅವಕಾಶ ಮಾಡಿ ಕೊಟ್ಟಿದ್ದಾನೆ…. ಮಕ್ಕಳಿಗಾಗಿ ಶ್ರಮ ಪಡುವೆ,, ಅವರಿಗೆ ಆರ್ಥಿಕವಾಗಿ, ಸಹಾಯ ಮಾಡಲು ಯಾವಾಗ್ಲೂ ಮುಂದೆ ಬರುವೆ..ಎಂದು ಅಭಿಮಾನದಿಂದ ನುಡಿಯುವವರು. ಅಷ್ಟೇ ಅಲ್ಲ
“ನಾನು ಯಾವದೇ ಶಾಲೆಯಲ್ಲಿ ಸೇವೆ ಮಾಡಿದರೂ.. ಮಕ್ಕಳು ವರ್ಗಕೋಣೆ ನನ್ನ,ಖುಷಿ ” ಎನ್ನುವ ಇವರ ತರಗತಿ ವಿಡಿಯೋ ಗಮನಿಸಿದಾಗ.. ಆ ತರಗತಿ ಕೋಣೆಯಲ್ಲಿ ಮದುವೆಯ ತೋರಣದಂತೆ ನಲಿಕಲಿ ಕಲಿಕಾ ಚಪ್ಪರ ಅಲಂಕಾರ ಮಾಡಿರುವರು. ಅಕ್ಷರಗಳ ಚಪ್ಪರ, ಪದಗಳ ಮಾಲೆ, ವಿವಿಧ ರೀತಿಯ ಗಣಿತ ಕಲಿಕಾ ಸಾಮಗ್ರಿಗಳು,,.. ನಲಿ -ಕಲಿ ವರ್ಗ ಕೋಣೆ ಅಂದ್ರೆ ಆಟಿಕೆಗಳ ಆಗರ…. ಮಕ್ಕಳಿಗೆ ಸಲೀಸಾಗಿ ಎಲ್ಲಾ ವಸ್ತುಗಳು ಸಿಗುವಂತೆ ಜೋಡಣೆ.. ಕ್ರಿಯಾಶೀಲ ಕ್ರಾಫ್ಟ್ ಚಟುವಟಿಕೆಗಳು.ಅಲ್ಲಿ ಕಂಡು ಬರುತ್ತವೆ. ಅವುಗಳನ್ನು ಮಕ್ಕಳಿಂದ ತಯಾರಿಸಿರುವರು ಎಂದು ಹೇಳಿ ಮತ್ತಷ್ಟು ಪೋಟೋ ಕಳಿಸಿದರು.ತುಂಬಾ ಸಂತೋಷ ಆಯಿತು.. ಕೊನೆಯದಾಗಿ.. ನೌಕರರ ಸಂಘದ ಪದಾಧಿಕಾರಿಗಳಾಗಿ ಎನ್ ಪಿ ಎಸ್ ಅನ್ನೋ ಪೆಡಂಬೂತ ಓಡಿಸಲು.. ಜಿಲ್ಲೆಯ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿಕೊಂಡು.. ಹೋರಾಟ ಮಾಡಲು 4 ಸಲ ಬೆಂಗಳೂರಿನವರೆಗೂ ಹೋರಾಟಗಾರರ ಜೊತೆಗೆ ಹೋಗಿ ಬಂದಿರುವರು…ಅಷ್ಟೇ ಅಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗುವ ಮೊದಲು ಶಿಕ್ಷಕ ಶಿಕ್ಷಕಿಯರ ವೇತನ ಪ್ರಮಾಣ ಪತ್ರ ಬಡ್ತಿ ಗೆ ಸಂಬಂಧಿಸಿದ ಅರ್ಜಿಗಳನ್ನು ಪಡೆದುಕೊಂಡು ಹೋಗಿ ಕಾರ್ಯಾಲಯಕ್ಕೆ ತಲುಪಿಸುವ ಇವರ ಕಾರ್ಯ ಅಭಿನಂದನಾರ್ಹ.. ಹೆಣ್ಣು ಅಬಲೆ ಅಲ್ಲ ಸಬಲೆ.. ಎಲ್ಲಾ ನಮ್ಮ ಮಹಿಳಾ ನೌಕರರಿಗೆ ನನ್ನ ಕಡೆಯಿಂದ ಆದಷ್ಟು ಸಹಾಯ ಮಾಡೋ ಪ್ರಯತ್ನ. ಎನ್ನುವ ಇವರ ಸದಭಿರುಚಿಯ ಗುಣ ಪೋನಿನಲ್ಲಿ ಮಾತಾಡುವಾಗ ತಿಳಿಯಿತು. ಮಾರ್ಚ್ 9 ರಂದು ಕಲಬುರಗಿ ಗೆ ಬನ್ನಿರಿ ಎಂದು ಆಮಂತ್ರಣ ನೀಡಿದೆ. ಈ ಆದರ್ಶ ದಂಪತಿಗಳ ಸೇವೆ ಹೀಗೆಯೇ ಸಾಗಲಿ. ಮಕ್ಕಳ ಶಿಕ್ಷಣ ದಲ್ಲಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಇವರ ಜೀವನ ಸದಾ ಸಂತಸದಿಂದ ತುಂಬಿರಲಿ, ಎಂದು ಆಶಿಸುವೆ.
ನಂದಿನಿ ಸುರೇಂದ್ರ ಸನಬಾಲ್
ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ಕಲಬುರಗಿ ಜಿಲ್ಲೆ.