ಸಿಂದಗಿ; ಕ್ರಿಸ್ಮಸ್ ಎಂದರೆ ಕೇವಲ ಆಚರಣೆ ಅಲ್ಲ, ಅದು ಒಬ್ಬರಿಗೊಬ್ಬರು ಪ್ರೀತಿ ಹಂಚಿಕೊಳ್ಳುವ ಹಬ್ಬಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸಹೋದರತ್ವವನ್ನು ಬೆಳೆಸಲು ಅಂತರಧರ್ಮೀಯ ಒಗ್ಗಟ್ಟು ಅತ್ಯಗತ್ಯ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ ರವರು ಕ್ರಿಸ್ಮಸ್ ಸಂದೇಶವನ್ನು ನೀಡಿದರು.
ನಗರದ ಸಂಗಮ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಸರ್ವಧರ್ಮ ಸಹ ಮಿಲನ ಕಾರ್ಯಕ್ರಮದ ಜೊತೆಗೆ ವಿಶೇಷವಾಗಿ ಗೌರವಾನ್ವಿತ ಅಧಿಕಾರಿಗಳು, ಪತ್ರಕರ್ತರು, ನ್ಯಾಯವಾದಿಗಳು ಹಾಗೂ ವಿವಿಧ ಕ್ಷೇತ್ರಗಳ ಹಲವಾರು ಮುಖಂಡರಿಗೆ ಔತಣ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಸಹನಿರ್ದೇಶಕ ಸಿಸ್ಟರ್ ಸಿಂತಿಯಾ ಡಿ ಮೆಲ್ಲೊ ರವರು ಬೈಬಲ್ ಪಠಣ ಮಾಡಿದರು. ನ್ಯಾಯವಾದಿ ಎಸ್. ಎಂ. ಕಾಚೂರ್ ರವರು ಕುರಾನ್ ಪಠಣ ಮಾಡಿದರು. ಇದೇ ವೇಳೆ ನ್ಯಾಯವಾದಿ ಶ್ರೀಯುತ ವಿನಾಯಕ ಬಡಗೇರ ರವರು ಭಗವದ್ಗೀತೆ ಪಠಣ ಮಾಡಿದರು.
ವಿವಿಧ ಧರ್ಮಗಳ ಪವಿತ್ರ ಗ್ರಂಥಗಳ ವಾಚನದ ಮೂಲಕ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು. ಸಮಾಜದಲ್ಲಿ ಏಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಸರ್ವಧರ್ಮ ಸಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಲೋಯೊಲ ಶಾಲೆಯ ಪ್ರಾಂಶುಪಾಲರಾದ ಒಂದನೆಯ ಫಾದರ್ ವಿಶಾಲ ಹಾಗೂ ವಿತ್ತ ನಿರ್ವಹಣೆಗಾರರಾದ ಫಾದರ್ ಜೀವನ್‌ಡಿಸೋಜ ಸಿಸ್ಟರ್ ವೀಣಾ ಮತ್ತು ಉಪಪ್ರಾಂಶುಪಾಲರಾದ ಸಿಸ್ಟರ್ ಸೋಪಿಯಾ ಸಂಗಮ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯಕುಮಾರ ಬಂಟನೂರ ನಿರೂಪಿಸಿದರು ರಾಜೀವ ಕುರಿಮನಿ ವಂದಿಸಿದರು.

