- Advertisement -
ಅಪ್ರಕಟಿತ ಪುಸ್ತಕ ವಿಭಾಗದಲ್ಲಿ ಇರಾಜ ವೃಷಭ ಎ. ಇವರು ಬರೆದ “ನನಸಾಯಿತು ಕನಸು” ಕವನ ಸಂಕಲನಕ್ಕೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ.
ನವೆಂಬರ್ 18,19 ರಂದು ನಡೆಯುವ ಗುರುಕುಲ ಕಲಾ ಪ್ರತಿಷ್ಠಾನದ 3 ನೇ ಸಮ್ಮೇಳನದಲ್ಲಿ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಯನ್ನು ಗುರುಕುಲ ಕಲಾ ಪ್ರತಿಷ್ಠಾನ ನೀಡಿ ಗೌರವಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದವರು. ಕವನ , ಕಥೆ, ಚಿತ್ರ ಕಥೆ, ಚುಟುಕು ಬರೆಯುವದು ಇವರ ಹವ್ಯಾಸ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ನಿರ್ವಹಣಾ ಅಭಿಯಂತರರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ.