spot_img
spot_img

ಆತ್ಮಹತ್ಯೆ…? ಎಲ್ಲದಕ್ಕೂ ಪರಿಹಾರವೇ…?

Must Read

- Advertisement -

“ಬದುಕಿನಲ್ಲಿ ಆಶಾ ಗೋಪುರ ಕಟ್ಟಿ ಬೆಳೆಸಿದ ತಂದೆ – ತಾಯಿಗಳಿಗೆ ಅವರ ಹೆತ್ತ ಮಕ್ಕಳು ಅವರ ಕಣ್ಣಮುಂದೆ ಯೇ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಯುವಕ – ಯುವತಿಯರು ಮನಸ್ಸನ್ನು ಅವರ ಬಾಲ್ಯದಲ್ಲಿ ತಿದ್ದಿ ತೀಡುವ ಕೆಲಸವಾಗಬೇಕು…”

ಆತ್ಮಹತ್ಯೆ…ಇಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ಈಗಂತೂ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೇ ಇದಕ್ಕೆ ಮೂಲ ಕಾರಣ?

  1. ಮಾನಸಿಕ ಅಸ್ವಸ್ಥತೆ
  2. ಭರವಸೆಯ ಕೊರತೆ
  3. ನಕಾರಾತ್ಮಕ ಮನಸ್ಥಿತಿ
  4. ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡ
  5. ಹತಾಶ ಮನೋಭಾವನೆ
  6. ಅತಿಯಾದ ಆತ್ಮ ವಿಶ್ವಾಸ
  7. ಧೈರ್ಯದ ಕೊರತೆ

ಇತ್ತೀಚೆಗೆ ಅಂದ್ರೆ ಈ ಕಳೆದ 3 ವರ್ಷಗಳಲ್ಲಿ ಆತ್ಮಹತ್ಯೆ ಇನ್ನೂ ಹೆಚ್ಚಾಗಿದೆ ಈ ಎರಡು ವರ್ಷದಲ್ಲಿ ಅತೀ ಹೆಚ್ಚು ಆತ್ಮಹತ್ಯೆಗೆ ಶರಣಾದವರು ವಿದ್ಯಾವಂತರು, ಬುದ್ದಿವಂತರು, ಉದ್ಯಮಿಗಳು, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು ಹಾಗಾದ್ರೆ ಮೇಲಿನ 7 ಕಾರಣಗಳು ಇವರ ಆತ್ಮಹತ್ಯೆಗೆ ಕಾರಣವಾದರೆ ಇವರಿಗೆ ಕೊಟ್ಟ ವಿದ್ಯಾಭ್ಯಾಸ, ಬುದ್ದಿ, ತಿಳಿವಳಿಕೆ ಏನಕ್ಕೆ ?

- Advertisement -

ಅದೇ ಬಡವರು, ಶ್ರಮಜೀವಿಗಳು, ರೈತರು, ಅವಿದ್ಯಾವಂತರ ಆತ್ಮಹತ್ಯೆಗೆ ಈ ಮೇಲಿನ ಕಾರಣಗಳು ಅನ್ವಯ ಆಗುವುದಿಲ್ಲ ಅನ್ಕೋತೀನಿ ಅವರು ಹೆದರೋದು,ಅವ್ರಿಗೆ ಅವಮಾನ ಆದ್ರೆ, ಹಾಗೇ ರೈತರಿಗೆ ಸಾಲದ ಕೂಪ ಜಾಸ್ತಿಯಾಗಿ ಬ್ಯಾಂಕ್ ನವರ ಟಾರ್ಚರ್ ಜಾಸ್ತಿ ಆದ್ರೆ(, ಬೆಳೆ ನಾಶ ಆದಾಗ ) ಅದೇ ಅವರಿಗೆ ಉತ್ತಮ ಮಳೆ, ಬೆಳೆಯಾದ್ರೆ ಯಾವ ಕಾರಣಕ್ಕೂ ಹೇಡಿಯಂತೆ ಆತ್ಮಹತ್ಯೆ ಮಾಡಿ ಕೊಳ್ಳೊಲ್ಲ ಇತ್ತೀಚೆಗೆ ಇವರ ಆತ್ಮಹತ್ಯೆ ಸರಣಿ ಕೂಡಾ ಕಡಿಮೆಯಾಗುತ್ತಾ ಬಂದಿರುವುದು ಸಮಾಧಾನಕರ ಸಂಗತಿ ಎನ್ನಬಹುದು. ಈ ಎಲ್ಲಾ ಕಾರ್ಮಿಕ, ಶ್ರಮ ಜೀವಿಗಳು ಇಂಥ ಪೆಂಡಾಮಿಕ್ ಸಮಯದಲ್ಲಿ ಕೂಡಾ ಧೃತಿಗೆಡದೆ ಯಾರನ್ನೂ ದೂರದೇ ಆತ್ಮವಿಶ್ವಾಸದಿಂದ ದುಡಿದು ಬದುಕುತ್ತಿದ್ದಾರೆ.

ಉನ್ನತ ವಿದ್ಯಾವಂತರೇ ದುರ್ಬಲ ಮನಸ್ಥಿತಿಯವರು?

ಕಳೆದ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಾಗಿ ಸಾಫ್ಟ್ ವೆರ್ ಉದ್ಯೋಗಿಗಳು, ಉದ್ಯಮಿಗಳು, ಹೈಲಿ ಎಜುಕೇಟೆಡ್ ಮಕ್ಕಳು, ಕಷ್ಟ ಅಂದ್ರೆ ತಿಳಿಯದೇ ಅಪ್ಪ ಅಮ್ಮ, ಅಜ್ಜ ಮಾಡಿಟ್ಟಿರುವ ಸಂಪಾದನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವವರು ಅಂದ್ರೆ ಇವರೆಲ್ಲ ಹಣದ ಮಹತ್ವ ಗೊತ್ತಿಲ್ಲದೇ, ಇದ್ದಾಗ ಅಚ್ಚು ಕಟ್ಟಾಗಿ ಜೀವನ ಮಾಡದೇ ಮುಂದಿನ ಜೀವನ ಬಗ್ಗೆ ಯೋಚನೆ, ಸೇವಿಂಗ್ ಮಾಡದೇ ಬೇಕಾ ಬಿಟ್ಟಿ ಬದುಕಿದ ಕೆಲವು IT, BT ಉದ್ಯೋಗಿಗಳು, ಅವಶ್ಯಕತೆಗಿಂತ, ಆದಾಯಕ್ಕಿಂತ ದೊಡ್ಡ ಸಾಮ್ರಾಜ್ಯ ಕಟ್ಟಲು ಹೋದ ಉದ್ಯಮಿಗಳು, ಹಾಗೇ ಹಿರಿಯರ ಹಣದಲ್ಲಿ ಐಷಾ ರಾಮಿ ಜೀವನ ಮಾಡಿ ಕೇಳಿದ್ದು ಕೂಡಲೇ ಸಿಗದೇ ಇದ್ರೆ ಡಿಪ್ರೆಸ್ ಆಗಿ ಸುಸೈಡ್ ಮಾಡಿಕೊಂಡ ಶ್ರೀಮಂತರ ಮಕ್ಕಳು !

ಹಾಗಾದ್ರೆ ನಾವು ತಪ್ಪುತ್ತಿರೋದು ಎಲ್ಲಿ?

ವಾಸ್ತವದ ಅರಿವು ಮೂಡಿಸಿ – ಚಿಕ್ಕವರಿರುವಾಗಲೇ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬದೆ, ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸೋದನ್ನು ಹೇಳಿಕೊಡದೆ, ವಾಸ್ತವದ ಅರಿವು ಮೂಡಿಸದೆ, ಕನಸಿನ ದೂರದ ಬೆಟ್ಟದ ನಿರೀಕ್ಷೆಯಲ್ಲಿ ಅವರನ್ನು ಹುರಿದುಂಬಿಸುತ್ತ, ಹಾಗೇ ಪ್ರತಿ ವಸ್ತುವಿನ ಬೆಲೆ ಹಾಗೇ ಅದರ ಅವಶ್ಯಕತೆ ಬಗ್ಗೆ ತಿಳಿ ಹೇಳದೆ ಹಣ ಇದೆ ಅಂತಾ ಕೇಳಿದ್ದೆಲ್ಲ ಕೊಡಿಸುತ್ತ, ಹಿರಿಯರು ಈ ಮಟ್ಟಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬ ತಿಳಿವಳಿಕೆ ನೀಡುತ್ತಾ ಬೆಳೆಸಬೇಕು.

- Advertisement -

ಮಾರ್ಗದರ್ಶನ:

ಹಾಗೇ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನು ಮಾಡುವ ಭರದಲ್ಲಿ ಪೋಷಕರ ಪ್ರತಿಷ್ಠೆಗೆ ಅವರಿಗೆ ಇಷ್ಟವಿಲ್ಲದ ವಿಷಯದಲ್ಲಿ ಓದಲು, rank ಬರುವಂತೆ ಒತ್ತಡ ಹೇರುವುದು, ಒಳ್ಳೆಯ ಆಫೀಸರ್, ಡಾಕ್ಟರ್, ಇಂಜಿನಿಯರ್ ಆದ್ರೆ ಮಾತ್ರ ಹೆಮ್ಮೆಯ ವಿಷಯ ಅನ್ಕೋಳ್ಳೋದು, ಹಾಗೇ ಅವರ ಪ್ರತಿಯೊಂದು ಬೆಳವಣಿಗೆಯಲ್ಲಿ ಅವರ ಜೊತೆಗೆ ಇದ್ದು ಒಳ್ಳೆ ಮಾರ್ಗದರ್ಶನ ಕೊಡದೇ ಇರೋದು, ಮಕ್ಕಳೇ ಆಗಲಿ ಮನೆಯಲ್ಲಿ ಯಾವ ಸದಸ್ಯರೇ ಆಗಲಿ ಜೀವನದ ಹಂತದಲ್ಲಿ ಯಾವುದೇ ವಿಷಯ, ಅಥವಾ ವ್ಯವಹಾರದಲ್ಲಿ ಹಿನ್ನಡೆಯಾದಾಗ ಮನೆಯವರೊಂದಿಗೆ ಕೂತು ಚರ್ಚೆ ಮಾಡಬೇಕು

ಆತ್ಮಸ್ಟೈರ್ಯ ಬೆಳಸಿ:

ಮನೆಯವರ ಆತ್ಮವಿಶ್ವಾಸದ ಮಾತುಗಳನ್ನು ಬಳಸಿಕೊಂಡು ಆತ್ಮ ಸ್ಥೈರ್ಯ ಬೆಳಸಿಕೊಳ್ಳದೆ ಅವಿವೇಕಿಗಳಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಧ್ಯ ವಯಸ್ಕರು ನೀವು ಹೋದ ಮೇಲೆ ಕುಟುಂಬ ನೋವಿನ ಜೊತೆಗೆ ಸಾಲ ಕೂಡಾ ತೀರಿಸಿ ಜೀವನ ಮಾಡಬೇಕು ಅನ್ನೋದನ್ನು ಅರಿಯದೇ ಸುಮ್ಮನೆ ಜೀವನ ಕಳೆದುಕೊಳ್ಳೋರಿಗೆ ಏನು ಹೇಳ್ಬೇಕು?

ಚಿಕ್ಕ ಮಕ್ಕಳು, ಪ್ರೀತಿಯಿಂದ ಸಾಕಿದ ತಂದೆ ತಾಯಿಯರನ್ನು ಬಿಟ್ಟು ಆತ್ಮ ಹತ್ಯೆ ಮಾಡಿಕೊಳ್ಳುವ ಇಂದಿನ ಮಕ್ಕಳಿಗೆ ಏನು ಹೇಳ್ಬೇಕು?

ಬದುಕಿನ ಬಗ್ಗೆ ಅರಿವು:

ಮೊದಲು ಪ್ರತಿಯೊಬ್ಬರು ಮನೆಯಲ್ಲಿ ಒಳ್ಳೆಯ ವಾತಾವರಣ, ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆತ್ಮ ಸಾಕ್ಷಿ ಹಾಗೇ ಪ್ರತಿ ನಿಮಿಷ ಮತ್ತು ಹಣದ, ಐಷಾರಾಮಿ ಜೀವನದ ಬಗ್ಗೆ ಅರಿವು ಮೂಡಿಸುತ್ತ ಅವರ ಜೀವನ ರೂಪಿಸಬೇಕು. ನಮ್ಮ ನಮ್ಮ ಮಿತಿಯಲ್ಲಿಯೇ ಬದುಕು ನಡೆಸುವ ಪಾಠವನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹೇಳುತ್ತ ಬರುವುದು ಉತ್ತಮ ಪರಿಣಾಮ ಬೀರಬಲ್ಲುದು.

(ಇವತ್ತು BSY ಮೊಮ್ಮಗಳ ಆತ್ಮಹತ್ಯೆ  
ವಿಷಯ ಕೇಳಿ – ನೋಡಿ ಬರೀಬೇಕು ಅನ್ನಿಸ್ತು)


ಶ್ರೀಮತಿ ಭಾರತೀ ರಾಮಕೃಷ್ಣ , ಹೆದ್ದೂರು , ತೀರ್ಥಹಳ್ಳಿ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ನೂರಾರು ದೃಶ್ಯಗಳು ತೋರುವವು ಕನಸಿನಲಿ ನೂರಾರು ಭಾವಗಳು ಜಾಗರದಲಿ ಸುಖನಿದ್ದೆಯೊಳಗಾವ ದೃಶ್ಯಭಾವಗಳಿಲ್ಲ ನಿದ್ದೆಯೊಲು‌ ಸಿದ್ಧಿಪಡೆ - ಎಮ್ಮೆತಮ್ಮ ಶಬ್ಧಾರ್ಥ ಜಾಗರ = ಎಚ್ಚರ ಶಬ್ಧಾರ್ಥ ಮನುಷ್ಯನಿಗೆ‌ ಜಾಗ್ರತೆ ಸುಷುಪ್ತಿ ಮತ್ತು ಸುಪ್ತಿ ಎಂಬ ಮೂರು ಅವಸ್ಥೆಗಳಿವೆ‌....
- Advertisement -

More Articles Like This

- Advertisement -
close
error: Content is protected !!
Join WhatsApp Group