- Advertisement -
ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಸರ್ಕಾರ, ಪೊಲೀಸರು ಎಲ್ಲ ಸೇರಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಅಂತ ಬಡಕೋತಾ ಇದ್ದಾರೆ. ಆದರೂ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಕೇವಲ ಪೊಲೀಸರ ಭಯದಿಂದ ಮಾಸ್ಕ್ ಧರಿಸುತ್ತಿದ್ದಾರೆ. ಎದುರಿಗೆ ಪೊಲೀಸರು ಬಂದಾಗಷ್ಟೇ ಇದ್ದಬದ್ದ ಬಟ್ಟೆಯನ್ನೇ ಮುಖಕ್ಕೆ ಸುತ್ತಿಕೊಂಡರೆ ಆಯಿತು ಅದೇ ಮಾಸ್ಕ್ ಆಯಿತು ಎಂಬ ನಂಬಿಕೆಯಲ್ಲಿ ಜನರು ಇದ್ದಾರೆ.
ಇಲ್ಲೊಬ್ಬ ಮಹಾನುಭಾವನನ್ನು ನೋಡಿ. ಗೋಣಿ ಚೀಲವನ್ನೇ ಮುಖಕ್ಕೆ ಕಟ್ಟಿಕೊಂಡು ಮಾಸ್ಕ್ ಮಾಡಿಕೊಂಡಿದ್ದಾನೆ! ಆತನ ಮುಂದೆ ಕೊರೋನಾ, ಸಾಲು ಸಾಲು ಆ್ಯಂಬುಲೆನ್ಸಗಳು ಏನೂ ಅಲ್ಲ !