ಬೀದರ – ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ.
ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿದ ಸ್ಥಳೀಯ ಶಾಸಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಈಶ್ವರ ಬಿ.ಖಂಡ್ರೆ ಪರಿಸ್ಥಿತಿಯನ್ನು ಅವಲೋಕಿಸಿದರು.
ಏಣಕೂರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಶಾಸಕ, ಹಾನಿಗೊಳಗಾದ ಮನೆಗಳ ಕುಟುಂಬಸ್ಥರಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ತಹಶೀಲ್ದಾರ ರಿಗೆ ತಿಳಿಸಿದರು.
ಮಾವಿನಹಳ್ಳಿ ಗ್ರಾಮದ ಬಳಿ ಇರುವ ಸೇತುವೆ ನೀರಿನ ರಭಸದಿಂದ ಕೊಚ್ಚಿ ಹೋದ ಸ್ಥಳಕ್ಕೆ ಆಗಮಿಸಿದ ಶಾಸಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೂಡಲೆ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ನಂತರ ನಾವದಗಿ ಗ್ರಾಮಕ್ಕೆ ತೆರಳಿದ ಶಾಸಕರು ಗ್ರಾಮದಲ್ಲಿ ನುಗ್ಗಿದ ಮಳೆ ನೀರಿನಿಂದ ಹಾನಿಗೊಳಗಾದ ಹನುಮಾನ ಮಂದಿರ ಗೋಪುರ ವೀಕ್ಷಿಸಿದರು ಹಾನಿಗೊಳಗಾದ ಮಂದಿರ ಗೋಪುರ ಕೂಡಲೆ ಜೀರ್ಣೋದ್ಧಾರ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಳೆ ಹಾನಿಗೊಳಗಾದ ದಾಡಗಿ ಗ್ರಾಮದ ವಿಲಾಸ ಪಾಟೀಲ ಅವರ ರೈತರ ಹೊಲಕ್ಕೆ ಭೇಟಿ ನೀಡಿ, ರೈತರು ಬೆಳೆದ ಬೆಳೆ ಕೈ ಬಾರದೆ ನೀರು ಪಾಲಾಗಿದ್ದು ಸರಕಾರದಿಂದ ರೈತರಿಗೆ ಪರಿಹಾರ ಕೊಡಿಸುವ ಪಯತ್ನ ಮಾಡಲಾಗುವುದು ರೈತರು ಯಾವುದೇ ಕಾರಣಕ್ಕು ಆತಂಕಗೊಳಗಾಗಬಾರದು ಎಂದು ಶಾಸಕರು ರೈತರಿಗೆ ಆಶ್ವಾಸನೆ ನೀಡಿದರು.