ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆರೋಪ ಪ್ರತ್ಯಾರೋಪ ಮಾಡಿಕೊಂಡು ತನ್ನ ವೈಯಕ್ತಿಕ ಬಗ್ಗೆ ಆರೋಪ ಮಾಡಿಕೊಂಡ ಇಬ್ಬರು ನಾಯಕರು.
ಕೇಂದ್ರ ಸಚಿವ ಭಗವಂತ ಖೊಬಾ ನಾಯಿ ಇದ್ದಾಂಗ ಎಂದು ಹೇಳಿ, ಶ್ವಾನ ಎಷ್ಟೇ ಬೊಗಳಿದರೂ ಆನೆ ಶಾಂತವಾಗಿ ನಡೆದುಕೊಂಡು ಹೋಗುತ್ತದೆ ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಶ್ವಾನಕ್ಕೆ ಹೋಲಿಸಿದ ಘಟನೆ ಬೀದರ್‌ನಲ್ಲಿ ನಡೆದಿದೆ.
ವಿಧಾನ ಪರಿಷತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಖೂಬಾ ಬಾಯಿಗೆ ಲಗಾಮು ಇಲ್ಲಾ. ಖೂಬಾ ದೊಡ್ಡ ಕಳ್ಳ. ಅವರು ಪರರನ್ನು ನಂಬದ ಸ್ಥಿತಿಯಲ್ಲಿದ್ದಾರೆ. ಖೂಬಾ ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ ಎಂದು ಯದ್ವಾತದ್ವಾ ನಿಂದಿಸಿದರಲ್ಲದೆ, ಜೊತೆಗೆ ನಾನು 5 ಲಕ್ಷ ರೈಬಾನ್ ಚಸ್ಮಾ ಹಾಕುತ್ತೇನೆ ಎಂದು ಖೂಬಾ ಹೇಳಿದ್ದಾರೆ. ನಾನು ಕನ್ನಡಕ ಖರೀದಿ ಮಾಡುವಾಗ ಅವರು ನನ್ನ ಜೊತೆಯಲ್ಲಿದ್ದರೇ ಎಂದು ಪ್ರಶ್ನಿಸಿದರು.
ತಾವು ಮಾತ್ರ ಹತ್ತು ಲಕ್ಷದ ಸೂಟ್ ಹಾಕಿಕೊಂಡು ತಿರುಗುತ್ತಾರಲ್ಲ ಅದನ್ನು ಯಾರು ಕೇಳಬೇಕು. ಸೋಲಿನ ಭೀತಿಯಿಂದ ಈ ರೀತಿಯಾದ ಹೇಳಿಕೆ ಕೊಡುತ್ತಿದ್ದಾರೆ.
ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇವಾಗ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಕಣ್ಣ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗೆ ಪತ್ರ ಬರೆದು ಈ ರಾಜ್ಯದಲ್ಲಿ ೪೦ ಶೇಕಡಾ ಕಮಿಷನ್ ವ್ಯವಹಾರ ನಡೆದಿದೆ ಎಂಬುದಾಗಿ ದೂರು ನೀಡಿದ್ದಾರೆ.ಭ್ರಷ್ಟಾಚಾರದಲ್ಲಿ ನಮ್ಮ ರಾಜ್ಯ ನಂ. ಒನ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪ ಚುನಾವಣೆ ಕಾವು ದಿನೇ ದಿನೇ ಏರುತ್ತಿದ್ದು ಆರೋಪ ಪ್ರತ್ಯಾರೋಪಗಳ ಸುರಿಮಳೆ ಆಗುತ್ತಿದೆ. ಈ ಇಬ್ಬರು ನಾಯಕರ ಕಾದಾಟ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ