ಸಿಂದಗಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಿಂದ ಸೋಂಕಿತರು ದಿನೇ ದಿನೇ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದ್ದರು ಕೂಡಾ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅದಕ್ಕೆ ಬಹಳಷ್ಟು ಜನ ಕಾಮೆಂಟ್ ಮಾಡಿದ್ದಾರೆ ಅದರಂತೆ ಡಾ. ಶಾಂತವೀರ ಮನಗೂಳಿಯವರ ದೂರವಾಣಿಯಿಂದ ಕೂಡಾ ಕಾಮೆಂಟ್ ಆಗಿದ್ದು ಅಲ್ಲಗಳೆಯುವಂತಿಲ್ಲ ಆದರೆ ಕೆಲವರು ಒಂದು ಜಾತಿಗೆ ಅಂಟಿಕೊಂಡು ವಿನಾಕಾರಣ ಅವರ ಮೇಲೆ ದೂರು ಸಲ್ಲಿಸುವುದು ಸರಿಯಲ್ಲ ಎಂದು ಡಿಎಸ್‍ಎಸ್ ಸಂಘಟನಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಅನೇಕ ಆಸ್ಪತ್ರೆಗಳಿವೆ ಅವೆಲ್ಲವು ಕೊವಿಡ್‍ಗೆ ಹೆದರಿ ಮುಚ್ಚಿಕೊಂಡಿವೆ ಆದರೆ ಡಾ. ಶಾಂತವೀರ ಮನಗೂಳಿಯವರು ಪುರಸಭೆ ಅಧ್ಯಕ್ಷ ಸ್ಥಾನದಲ್ಲಿದ್ದರು ಕೂಡಾ ಆ ಸ್ಥಾನಕ್ಕೆ ಮನ್ನಣೆ ನೀಡದೇ ದಲಿತರು, ಸವರ್ಣಿಯರೆನ್ನದೇ ಮನಗೂಳಿ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ತೆರೆದು ಕೊರೋನಾ ವಾರಿಯರ್ಸ್ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಆದಾಗ್ಯೂ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ ಆ ಕೋವಿಡ್ ಸೆಂಟರಕ್ಕೆ ಭೇಟಿ ನೀಡಿಲ್ಲ ಮತ್ತು ಆ ಕೇಂದ್ರಕ್ಕೆ ಆಕ್ಸಿಜನ್, ರೆಮಿಡಿಸಿವಿರ್ ಒದಗಿಸಲು ಮುಂದಾಗಿಲ್ಲ ಇಂತಹ ಸಂದರ್ಭದಲ್ಲಿ ಜಾತ್ಯತೀತವಾಗಿ ಪಕ್ಷ ಬೇದ ಮರೆತು ಕೊವಿಡ್‍ಗೆ ಹೆದರದೇ ಜೀವದ ಹಂಗು ತೊರೆದು ಸೇವೆ ಸಲ್ಲಿಸಲು ಮುಂದಾಗಿದ್ದಾರೆ ಅವರನ್ನು ಸ್ಮರಣೆ ಮಾಡಬೇಕು ಅದನ್ನು ಬಿಟ್ಟು ವಿನಾಕಾರಣ ಅವರ ಮೇಲೆ ದೂರು ಸಲ್ಲಿಸಿದ್ದು ಒಂದು ಪಕ್ಷ ಮತ್ತು ಒಂದು ಜಾತಿಗೆ ಸಿಮೀತವಾಗಿದ್ದನ್ನು ಎತ್ತಿ ತೋರಿಸಿದಂತಾಗಿದೆ ಎಂದು ದೂರಿದ್ದಾರೆ.
ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ 30 ಕೋವಿಡ್ ಸೊಂಕಿತರು ದಾಖಲಾಗಿದ್ದರೆ ಮನಗೂಳಿ ಆಸ್ಪತ್ರೆಯಲ್ಲಿ ಕನಿಷ್ಟ 60 ಬೆಡ್ಡುಗಳಲ್ಲಿ ಕೊವಿಡ್ ಸೊಂಕಿತರು ಆರೈಕೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ ಅಳವಡಿಸುವ ವೈದ್ಯರೇ ಇಲ್ಲ. ಪಟ್ಟಣ ಸೇರಿದಂತೆ ತಾಲೂಕಿನ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಸೆಂಟರಗಳಲ್ಲಿ ವೈದ್ಯರೆ ಇಲ್ಲ ಇಂತಹ ಸಂದರ್ಭದಲ್ಲಿ ಸಂಸದರಾಗಲಿ, ಸಚಿವರಾಗಲಿ ಪರಿಶೀಲಿಸಿ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು ಇದನ್ನೆಲ್ಲ ಡಾ. ಶಾಂತವೀರ ಅವರ ವಿರುದ್ಧದ ದೂರು ಸಲ್ಲಿಸಿದವರಿಗೆ ಮನವರಿಕೆಯಾಗಬೇಕು ಇದರ ಬಗ್ಗೆ ಹೋರಾಟ ನಡೆಸಿ ಬಡವರ, ದೀನ ದಲಿತರಿಗೆ ನ್ಯಾಯ ಕೊಡಿಸಿ ಸುಖಾಸುಮ್ಮನೆ ಒಬ್ಬ ನಿಯತ್ತಿನ ಸಿಪಾಯಿ ಡಾ. ಮನಗೂಳಿ ಅವರ ವಿರುದ್ದ ದೂರು ಸಲ್ಲಿಸಿದ್ದು ಖಂಡನೀಯ ವಿಷಯ ಎಂದು ಕಾಂಬಳೆ ಹೇಳಿದರು.