ಮಗುವಿನ ಶ್ರೇಯ ಪಾಲಕ, ಶಿಕ್ಷಕ ಇಬ್ಬರ ಜವಾಬ್ದಾರಿ

Must Read

ಸಿಂದಗಿ: ಮಗುವಿನ ಶ್ರೇಯೋಭಿವೃದ್ಧಿಗೆ ಶಿಕ್ಷಕರಷ್ಟೇ ಜವಾಬ್ದಾರರಲ್ಲ ಪಾಲಕರು ಮತ್ತು ಶಿಕ್ಷಕರು ಸೇರಿಕೊಂಡು ಮಗುವಿನ ಭೌತಿಕ ಗುಣಮಟ್ಟವನ್ನು ಬೆಳೆಸಲು ಸಾಧ್ಯ ಎಂದು ಆಡಳಿತಾಧಿಕಾರಿ ಎಂ. ಎಂ ಅಸಂತಾಪೂರ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಎಲೈಟ್ ವಿಜ್ಞಾನ ಪದವಿ ಪೂರ್ವ ಆಂಗ್ಲ ಮಾಧ್ಯಮ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಪ್ರಥಮ ಪಿಯುಸಿಯ ಸ್ವಾಗತ ಕೋರುವ ಸಮಾರಂಭದಲ್ಲಿ ಮಕ್ಕಳಿಗೆ ಪುಷ್ಪಾರ್ಚನೆ ನೇರವೇರಿಸಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ 8 ಗಂಟೆ ಇರುತ್ತಾರೆ ಉಳಿದ ಸಮಯದಲ್ಲಿ ಪಾಲಕರ ಪೋಷಣೆಯಲ್ಲಿರುತ್ತಾರೆ ಅದನ್ನು ಪಾಲಕರು ಪ್ರತಿದಿನ ಶಾಲೆಯಿಂದ ಮಗುವಿನ ಪಠ್ಯಪುಸ್ತಕಗಳನ್ನು ಸೂಕ್ಷ್ಮತೆಯಿಂದ ಗಮನಿಸಿ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದಾಗ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಶಿಕ್ಷಣದ ಎಲ್ಲ ಭಾರವನ್ನು ಶಿಕ್ಷಕರ ಮೇಲೆ ಹೊರಿಸಿ ಕುಳಿತುಕೊಳ್ಳುವುದರಿಂದ ಮಗುವಿನ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳುತ್ತದಲ್ಲದೆ ಮುಂದಿನ ಶೈಕ್ಷಣಿಕ ವರ್ಷದ ಶಿಕ್ಷಣಕ್ಕೆ ಹೋಗುವುದು ಕಷ್ಠಕರವಾಗುತ್ತದೆ ಕಾರಣ ಮಕ್ಕಳ ಶಿಕ್ಷಣಕ್ಕೆ ಪಾಲಕರು, ಶಿಕ್ಷಕರು, ಬಾಲಕರು ಒಂದುಗೂಡಿ ಶಿಕ್ಷಣಕ್ಕೆ ಒತ್ತು ನೀಡಿದರೆ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಮುಸ್ತಫಾ ಅಸಂತಾಪೂರ್, ಆಡಳಿತಾಧಿಕಾರಿ ಎಂ. ಎಂ ಅಸಂತಾಪೂರ್, ಪ್ರಾಚಾರ್ಯ ಐ.ಎ.ಜುಮನಾಳ ಹಾಗೂ ಎಲ್ಲಾ ಸಿಬ್ಬಂದಿವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group