ಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು – ಸಿಂದಗಿ ಪುರಸಭಾಧ್ಯಕ್ಷ

Must Read

ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ ಆದೇಶದ ಹಿನ್ನೆಲೆಯಲ್ಲಿ ೮೪ ಬಡಕುಟುಂಬಗಳ ಮನೆಗಳನ್ನು ತಹಶೀಲ್ದಾರ ಹಾಗೂ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ ಇದರಿಂದ ಆ ೮೪ ಕುಟುಂಬಗಳಿಗೆ ಎಷು ದುಃಖವಾಗಿದೆ ನಮ್ಮೆಲ್ಲ ಸದಸ್ಯರಿಗೂ ದುಃಖವಾಗಿದೆ ಅವರನ್ನು ನಾವೆಂದೂ ಕೈಬಿಡುವುದಿಲ್ಲ ಅವರಿಗೆ ಆಲಮೇಲ ರಸ್ತೆಯಲ್ಲಿರುವ ಪುರಸಭೆಯ ೧೩ ಎಕರೆ ಜಮೀನಿನಲ್ಲಿ ಸೂರು ಕಲ್ಪಿಸಿಕೊಡುತ್ತೇವೆ ಅದಕ್ಕೆ ಆ ಎಲ್ಲ ಕುಟುಂಬಗಳು ನಮ್ಮೊಂದಿಗೆ ಸಹಕರಿಸಲು ಪತ್ರಿಕೆ ಮೂಲಕ ವಿನಂತಿಸುತ್ತೇವೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನನ್ನ ಅವಧಿಯಲ್ಲಿಯೇ ಹೈಕೋರ್ಟದಿಂದ ನೋಟಿಸ್ ಬಂದಿತ್ತು ಆವಾಗ್ಗೆ ಸುಮಾರು ೧೦ ಲಕ್ಷ ಖರ್ಚು ಮಾಡಿ ಸುಪ್ರೀಂಕೋರ್ಟಗೆ ದಾವೆ ಹೊಡಲಾಗಿತ್ತು ಅಲ್ಲಿ ನಮ್ಮ ವಿರುದ್ಧವಾಗಿ ತೀರ್ಪು ಬಂದಿತ್ತು ನಂತರ ನಮ್ಮ ಅವಧಿ ಮುಗಿದ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ ಮತ್ತೆ ನಾನು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಸುಪ್ರೀಂಕೋರ್ಟ ಆದೇಶವಾದ ನನ್ನ ನಜರಿಗೆ ಬಂದಿದೆ ಅಲ್ಲಿಂದ ಜಮೀನಿನ ಮಾಲೀಕನ ಜೊತೆ ನಿವಾಸಿಗಳ ಮಧ್ಯ ಸಂದಾನ ಮಾಡಿಸಲು ಶಾಸಕ ಅಶೋಕ ಮನಗೂಳಿ ಅವರು ನ್ಯಾಯಾಧೀಶರಲ್ಲಿ ಕಾಲಾವಕಾಶ ಕೇಳಿಕೊಂಡಿದ್ದರು ಆದರೆ ಆ ಜಮೀನಿನ ಮಾಲಿಕ ಒಪ್ಪದ ಕಾರಣ ಸುಪ್ರೀಂ ಕೋರ್ಟ ಆದೇಶದಂತೆ ತೆರವುಗೊಳಿಸಲು ಮುಂದಾಗಿದ್ದೇವೆ. ಅವರನ್ನು ನಾವೆಂದು ಕೈಬಿಡುವುದಿಲ್ಲ ಪುರಸಭೆವತಿಯಿಂದ ಖರೀದಿಸಲಾದ ೧೩ ಎಕರೆ ಜಮೀನಲ್ಲಿ ಅವರಿಗೆ ನಿವೇಶನ ನೀಡುವುದಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಅಲ್ಲದೆ ನಮ್ಮ ಮನೆ ಯೋಜನೆಯಡಿ ಲೋನ ಹಾಕಿಸಿ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತೇವೆ ಎಂದ ಅವರು, ಇದು ಶರಣಪ್ಪ ಸುಣಗಾರ ಶಾಸಕರಿದ್ದ ಸಂದರ್ಭದಲ್ಲಿ ಮನೆಗಳ ಹಕ್ಕು ಪತ್ರಗಳನ್ನು ನೀಡಿದ್ದಾರೆ ವಿನಾಕಾರಣ ನಮ್ಮ ಮನೆತನದ ಮೇಲೆ ದೂರುವುದು ಸರಿಯಲ್ಲ. ಸುಪ್ರೀಂಕೋರ್ಟ ಆದೇಶವನ್ನು ಪಾಲನೆ ಮಾಡಲಾಗಿದೆ ವಿನಃ ಯಾವುದೇ ದುರುದ್ದೇಶವಿಲ್ಲ. ಯಾರದೋ ಮಾತಿಗೆ ಕಿವಿ ಕೊಡುವುದು ಸರಿನಾ ಎಂದು ಪ್ರಶ್ನಿಸಿದರು.

ಉಪಾದ್ಯಕ್ಷ ಸಂದೀಪ ಚೌರ ಮಾತನಾಡಿ, ೮೪೨/೨ ರಲ್ಲಿರುವ ೮೪ ಬಡಕುಟುಂಬಗಳಿಗೆ ನೀಡಿದ ಜಮೀನಿನ ವ್ಯಾಜ್ಯ ಸುಮಾರು ೨೫ ವರ್ಷಗಳಿಂದ ಕೋರ್ಟ ಮೆಟ್ಟಿಲೇರಿದೆ ಅದು ಅಂತಿಮ ಹಂತಕ್ಕೆ ಸುಪ್ರೀಂ ಕೊರ್ಟ ಆದೇಶವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಯಾರು ದೊಡ್ಡವರಿಲ್ಲ ಕೋರ್ಟ ಆದೇಶಕ್ಕೆ ಎಲ್ಲರು ತಲೆ ಬಾಗಲೇಬೇಕು ಆ ಕಾರಣಕ್ಕೆ ಮನೆಗಳನ್ನು ತೆರವುಗೊಳಿಸಿದ್ದು ನೋವಿನ ಸಂಗತಿ. ಅದಕ್ಕೆ ಶಾಸಕ ಅಶೋಕ ಮನಗೂಳಿ ಅವರು ಆ ಜಮೀನಿನ ಮಾಲೀಕನ ಜೊತೆ ಸಂಧಾನ ಮಾಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಅದಕ್ಕೆ ಕ್ಯಾರೆ ಎನ್ನದೆ ಇರುವುದರಿಂದ ಮನೆಗಳ ತೆರವು ಪುರಸಭೆಯ ಎಲ್ಲ ಸದಸ್ಯರ ನಿರ್ಣಯದಂತೆ ಅವರಿಗೆ ಸೂರು ಕಲ್ಪಿಸಿಕೊಡಲು ಪಣತೊಟ್ಟಿದ್ದೇವೆ. ಆ ಎಲ್ಲ ಕುಟುಂಬಗಳ ಸಹಕಾರವಿರಲಿ ಎಂದು ಮನವಿ ಮಾಡಿಕೊಂಡರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಸ್ಥಾಯಿ ಸಮಿತಿ ಅದ್ಯಕ್ಷ ಶ್ರೀಶೈಲ ಬೀರಗೊಂಡ, ಮಾಜಿ ಅದ್ಯಕ್ಷ ಬಾಷಾಸಾಬ ತಾಂಬೋಳಿ, ಸದಸ್ಯರಾದ ಗೊಲ್ಲಾಳ ಬಂಕಲಗಿ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ರಹೀಂ ದುದ್ದನಿ, ಬಸು ಸಜ್ಜನ್ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group