Homeಸುದ್ದಿಗಳುಸ್ವಾತಂತ್ರ್ಯವನ್ನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ - ಎಸ್ ಬಿ ಸಿದ್ನಾಳ

ಸ್ವಾತಂತ್ರ್ಯವನ್ನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ – ಎಸ್ ಬಿ ಸಿದ್ನಾಳ

ಬೆಳಗಾವಿ – ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಮತ್ತು ಕರ್ನಾಟಕ ಹಿರಿಯ ನಾಗರಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ15 ರಂದು79. ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಧ್ವಜಾರೋಹಣವನ್ನು ನಿ.ನೌ. ಸಂಘದ ಅಧ್ಯಕ್ಷರಾದ ಎಸ್ ಬಿ ಸಿದ್ನಾಳ ನೆರವೇರಿಸಿದರು. ಅವರು ಮಾತನಾಡುತ್ತಾ ಶಾಂತಿಯಿಂದ ಅಹಿಂಸಾ ಮಾರ್ಗದಲ್ಲಿ ಮಹಾತ್ಮಾಗಾಂಧೀಜಿ, ,ವಲ್ಲಭಭಾಯಿ ಪಟೇಲ್ ಲಾಲಬಹಾದ್ದೂರ ಶಾಸ್ತ್ರೀಜಿ, ಸುಭಾಷ್ ಚಂದ್ರ ಬೋಸ್, ದಾದಾಬಾಯಿ ನವರೊಜಿ,ಲೊಕಮಾನ್ಯ ಟಿಳಕ, ನೆಹರು ಮುಂತಾದವರ ತ್ಯಾಗ ಬಲಿದಾನದ ಪರಿಣಾಮವಾಗಿ ನಾವು ಇಂದು ಸ್ವಾತಂತ್ರ್ಯದ ಸವಿಯನ್ನ ಸವಿಯುತ್ತಿದ್ದೇವೆ. ಹಗಲು ರಾತ್ರಿ ಎನ್ನದೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಹಲವರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅದನ್ನ ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ರಾಜ್ಯಾಧ್ಯಕ್ಷರಾದ ಎ ವಾಯ್ ಬೆಂಡಿಗೇರಿ, ಮುದಕವಿ, ಮಹಾಂತೇಶ ಹಿರೇಮಠ, ಬಸವರಾಜ್ ಛೆಟ್ಟರ್ ,ಸುಶೀಲಾ ರಜಪೂತ, ಡಾ. ಗೋಮಾಡಿ ,ಕೆಂಚರಾಹುತ, ಭಜಂತ್ರಿ ,ಕಟ್ಟಿಮನಿ ,ಹೆದ್ದೂರಶೆಟ್ಟಿ ,ಕುಲಕರ್ಣಿ ,ಆರ್ ಬಿ ಬನಶಂಕರಿ,ಎಂ ವೈ ಮೆಣಸಿನಕಾಯಿ,ಕ್ಯಾದಗೇರಿ, ವಾಗೂಕರ,ಕೌಶಲ್ಯಾ,ಮುಂತಾದವರು ಉಪಸ್ಥಿತರಿದ್ದರು. ಜೆ ಬಿ.ಕಟ್ಟಿಮನಿ ಸ್ವಾಗತಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group