ಗಂಗಾವತಿ ಹಾಗೂ ಕೊಪ್ಪಳ ದಿಂದ ಆಗಮಿಸಿದ್ದ “ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಕೋರ್ಸ 2023-24 ರ ಪ್ರಶಿಕ್ಷಣಾರ್ಥಿಗಳಿಗೆ” ಆಯೋಜಿಸಲಾಗಿದ್ದ ಕಪ್ಪತಗುಡ್ಡದ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಶಿಸುತ್ತಿರುವ ಪಾರಂಪರಿಕ ಕೃಷಿಯೆಡೆಗೆ ಮರಳಿ ಸಾಗುವ ಅನಿವಾರ್ಯತೆ ಈಗ ಉಂಟಾಗಿದ್ದು ರಾಸಾಯನಿಕ ಕೃಷಿಯಿಂದ ಹೊರಬರಲು ರೈತರಿಗೆ ಪೂರಕ ಬಾತಾವರಣ ಕಲ್ಪಿಸಲು ನಾವೆಲ್ಲರೂ ಶ್ರಮಿಸಬೇಕಾಗಿದ್ದು, ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಲು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಾಲಚಂದ್ರ ಜಾಬಶೆಟ್ಟಿ ಯವರು ನೀಡಿದ ಉಪನ್ಯಾಸದಲ್ಲಿ, ರೈತರು ಸುಸ್ಥಿರ ಕೃಷಿಯಲ್ಲಿ ತೊಡಗುವಂತೆ ಪ್ರೇರಕರಾಗುವಂತೆ ಮನವಿ ಮಾಡಿದರು.
ಆರೋಗ್ಯಕರ ಜೀವನಕ್ಕಾಗಿ ರಾಸಾಯನಿಕ ಕೃಷಿಗೆ ವಿದಾಯ ಹೇಳುವ ಕಾಲ ಸನ್ನಿಹಿತ ವಾಗಿದ್ದು ಅದಕ್ಕಾಗಿ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ನಂದಿವೇರಿ ಪೂಜ್ಯರು ಹಮ್ಮಿಕೊಂಡಿರುವ ಗೋ ಹಾಗೂ ನಂದಿ ಆಧಾರಿತ ಕೃಷಿ ಅಳವಡಿಕೆ ಅಭಿಯಾನದಲ್ಲಿ ಭಾಗಿಯಾಗಲು ಕೋರಿದರು.
ಭೂಮಿ ಬರಡಾಗುತ್ತಿರುವುದನ್ನು ತಡೆಯಲು ಸಾವಯವ ಕೃಷಿಗೆ ಮರಳಲು ಈಗ ಸಕಾಲವಾಗಿದ್ದು, ಪ್ರಕೃತಿಯ ನೈಸರ್ಗಿಕ ಕ್ರಿಯೆಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಇಡಿ ಮಾನವ ಕುಲವೇ ನಿರ್ನಾಮ ವಾಗುವ ಅಪಾಯವನ್ನೆದುರಿಸಬೇಕಾಗುತ್ತದೆಯೆಂದು ತಿಳಿಸಿದರು.
100 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳ ನೇತೃತ್ವವನ್ನು ಗಂಗಾವತಿಯ ಜಂಬಣ್ಣ ಹಾಗೂ ಕೊಪ್ಪಳದ ಮಹೇಶ್ವರ ಶಾಸ್ತ್ರಿ ಯವರು ವಹಿಸಿದ್ದರು.
ಪೂಜ್ಯಶ್ರೀ ಶಿವಕುಮಾರಮಹಾಸ್ವಾಮಿಗಳು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠರವರ ನೇತೃತ್ವದಲ್ಲಿ ನೂರು ಜನರ ತಂಡ ಕಪ್ಪತಗುಡ್ಡ ಚಾರಣದಲ್ಲಿ ತೊಡಗಿರುವ ನೋಟವನ್ನು ನೋಡಲು ಎರಡು ಕಣ್ಣುಗಳ ಸಾಲದಾದವು.