spot_img
spot_img

ಸೆ.೧ರಂದು ಡಾ.ನೀ.ಗೂ.ರಮೇಶ್‌ರವರ ‘ಜಲ ಸಂವೇದನೆ’ ಕೃತಿ ಬಿಡುಗಡೆ

Must Read

spot_img
- Advertisement -

ಮೈಸೂರು -ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಂಘ, ಮಂಡ್ಯ ಹಾಗೂ ಲಗೋರಿ ಬಳಗ, ಮೈಸೂರು ಇವರ ವತಿಯಿಂದ ಸಾಹಿತಿ ಡಾ.ನೀ.ಗೂ.ರಮೇಶ್‌ರವರ ಹೊಸಗನ್ನಡ ಕಾವ್ಯ ‘ಜಲ ಸಂವೇದನೆ’ ಪುಸ್ತಕ ಲೋಕಾರ್ಪಣೆಯು ಸೆ.೧ರಂದು ಭಾನುವಾರ ಸಂಜೆ ೪.೩೦ಕ್ಕೆ ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುವವರು ಪ್ರಸಿದ್ಧ ವಿಮರ್ಶಕರಾದ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ್‌ಗೌಡ ಆಶಯ ನುಡಿಗಳನ್ನಾಡಲಿದ್ದು, ‘ಜಲ ಸಂವೇದನೆ’ ಕೃತಿಯನ್ನು ಕುರಿತು ವಿದ್ವಾಂಸರಾದ ಪ್ರೊ.ಸಿ.ನಾಗಣ್ಣ ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎ.ರಂಗಸ್ವಾಮಿ, ಪ್ರೊ.ನೀಲಗಿರಿ ಎಂ.ತಳವಾರ್, ಪ್ರಕಾಶಕರಾದ ಯು.ಎಸ್.ಉಮೇಶ್ ಹಾಗೂ ಸಾಹಿತಿ ಡಾ.ನೀ.ಗೂ.ರಮೇಶ್ ಭಾಗವಹಿಸಲಿದ್ದಾರೆ. ಸಂಜೆ ೪ಕ್ಕೆ ಗಾಯಕ ಹೊಸಮಾಲಂಗಿ ಕುಮಾರ್ ಮತ್ತು ಆರ್.ನಾಗೇಶ್‌ರವರಿಂದ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

- Advertisement -

ಡಾ.ನೀ.ಗೂ.ರಮೇಶ್ ರವರ ಕಿರು ಪರಿಚಯ:

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ನೀಲಕಂಠನ ಹಳ್ಳಿಯ ಸಾಹಿತಿ ನೀ.ಗೂ.ರಮೇಶ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಸ್ನಾತಕ ಪದವಿಯನ್ನು ಎರಡು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಕನ್ನಡ ಕಾವ್ಯಗಳಲ್ಲಿ ಜಲ ಸಂವೇದನೆ ಕುರಿತು ಮಹಾಪ್ರಬಂಧವನ್ನು ಮಂಡಿಸಿ ಪಿಹೆಚ್‌ಡಿ ಪದವೀಧರರಾಗಿರುತ್ತಾರೆ. ಪ್ರಸ್ತುತ ಹುಣಸೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ೧೩ ಪ್ರಕಟಿತ ಕೃತಿಗಳು, ೩೫ ಪ್ರಕಟಿತ ಬಿಡಿ ಲೇಖನಗಳು, ೧೮ ಪ್ರಬಂಧ ಹಾಗೂ ಉಪನ್ಯಾಸ, ೧೬ ವಿಚಾರ ಸಂಕಿರಣಗಳು, ೧೩ ಕವಿಗೋಷ್ಟಿಗಳು ಹಾಗೂ ೨ ಅಂಕಣ ಬರಹಗಳಲ್ಲಿ ಮಾನ್ಯತೆಯನ್ನು ಪಡೆದಿರುತ್ತಾರೆ. ಪ್ರಕಟಗೊಂಡಿರುವ ಪ್ರಮುಖ ಕೃತಿಗಳಲ್ಲಿ ಪ್ರಮುಖವಾಗಿ ದೀಪ ದ್ವೀಪಗಳ ನಡುವೆ, ಗುಲಗಂಜಿ, ಹೊತ್ತಿನಕಣ್ಣು, ಬೆಳಕಿನ ಬೇರು, ಕನ್ನಡದಲ್ಲಿ ಮುಕ್ತಕ ಸಾಹಿತ್ಯ, ಮಹಾಕಾವ್ಯ, ಖಂಡಕಾವ್ಯ, ಕಥನ ಗೀತೆ, ಹೊಸಗನ್ನಡ ಕಾವ್ಯ, ಜಲ ಸಂವೇದನೆ, ಜೀವನ ಚರಿತ್ರೆಯಾಗಿ ಲೋಕೋಪಕಾರದ ಎ.ರಂಗಸ್ವಾಮಿ, ನೆಲದನಂಟು ಪ್ರಬಂಧವನ್ನು ಪ್ರಕಟಿಸಿರುತ್ತಾರೆ.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group