ಜನ್ನಾ ಸನದಿ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ಕೃತಿ ಆಹ್ವಾನ

Must Read

ಬೆಳಗಾವಿ 22- ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ. ಈ ವರ್ಷ ಮಕ್ಕಳ ಸಾಹಿತ್ಯ ಕೃತಿಗೆ ಪ್ರಶಸ್ತಿ ನೀಡಲಾಗುವದು. ಇದು ಉದಯೋನ್ಮುಖರಿಗೆ ಮೀಸಲಾಗಿದ್ದು, 35 ವರ್ಷದೊಳಗಿನ ಲೇಖಕರು ಜನ್ಮ ದಾಖಲೆಯೊಂದಿಗೆ 2020ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯದ ಯಾವುದೇ ಪ್ರಕಾರದಲ್ಲಿರುವ ಕೃತಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಸತ್ವ ಹಾಗೂ ಗಾತ್ರ ಉಳ್ಳ ಕೃತಿಗಳಿಗೆ ಆದ್ಯತೆ ನೀಡಲಾಗುವದು.

ಪ್ರಶಸ್ತಿ ರೂ. 5000 ನಗದು, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದೆ. ನವೆಂಬರ ತಿಂಗಳಲ್ಲಿ ಆಯೋಜಿಸುವ ಅರ್ಥಪೂರ್ಣ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಆಸಕ್ತರು ಅಕ್ಟೋಬರ್ 15 ರೊಳಾಗಾಗಿ ಕೃತಿಯ 4 ಪ್ರತಿಗಳನ್ನು ಶ್ರೀ ಎಂ ವಾಯ್ ಮೆಣಸಿನಕಾಯಿ, “ನೇಸರ”, ಮನೆ ನಂ. 7360, ಸೆಕ್ಟರ – 10, ಆಂಜನೇಯ ನಗರ, ಬೆಳಗಾವಿ- 17, ಮೊ. 9449209570 ಇಲ್ಲಿಗೆ ಕಳುಹಿಸಬೇಕೆಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಡಾ.ರಾಮಕೃಷ್ಣ ಮರಾಠೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group