ಜನವರಿ 13 ಕಲಾವಿದೆ ಸುಧಾ ಪ್ರಸನ್ನ ಅಭಿನಯದ ‘ಪಾಂಚಾಲಿ’ ನಾಟಕ ಪ್ರದರ್ಶನ

Must Read

ಬೆಂಗಳೂರಿನ ನಾಟ್ಯ ದರ್ಪಣ ಸಂಸ್ಥೆಯ ವತಿಯಿಂದ ಖ್ಯಾತ ರಂಗಕರ್ಮಿ ಅಬ್ಬೂರು ಜಯತೀರ್ಥ ನಿರ್ದೇಶಿಸಿರುವ, ಹಿರಿಯ ರಂಗ ಕಲಾವಿದೆ ಸುಧಾ ಪ್ರಸನ್ನ ಅಭಿನಯದ ‘ಪಾಂಚಾಲಿ’ ನಾಟಕ ಪ್ರದರ್ಶನವನ್ನು ಇದೇ ಜನವರಿ 13 ಶುಕ್ರವಾರ ಸಂಜೆ 7.00 ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ನಾಟಕ ಬೆಂಗಳೂರು 2023ರ ಅಂವಾಗಿ ನಡೆಯುತ್ತಿರುವ 15ನೇ ವರ್ಷದ ರಂಗ ಸಂಭ್ರಮ ನಾಟಕೋತ್ಸವದಲ್ಲಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ರಚಿಸಿರುವ ‘ಪಾಂಚಾಲಿ’ ನಾಟಕದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಸುಧಾ ಪ್ರಸನ್ನ ಅಭಿನಯಿಸಲಿದ್ದಾರೆ.

ಮಹಾಭಾರತದ ಕಥಾಹಂದರವಿರುವ ಈ ನಾಟಕದಲ್ಲಿ ಸೀಮಿತ ಪಾತ್ರಗಳಿದ್ದರು ರಂಗದ ಮೇಲೆ ವಿಶಿಷ್ಟ  ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಕಲಾಭಿಮಾನಿಗಳು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಆಯೋಜಕರು ತಿಳಿಸಿದ್ದಾರೆ.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group