ಜೀವಾನುಭವ ಶಾಲೆಯೇ ಜನಪದ: ಡಾ. ರಾಮು ಮೂಲಗಿ

Must Read

ಕಲ್ಲೋಳಿ: ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹುಬ್ಬಳ್ಳಿಯ ಖ್ಯಾತ ಜನಪದ ಸಾಹಿತಿ, ಗಾಯಕ ಡಾ. ರಾಮು ಮೂಲಗಿ ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಸನ್ 2023-24ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಹಾಗೂ ವಿವಿಧ ವೇದಿಕೆಗಳ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಜಾನಪದ ಬದುಕು ನಮ್ಮ ಪಿತ್ರಾರ್ಜಿತರ ಬಹುದೊಡ್ಡ ಆಸ್ತಿ. ಅದು ಶಿಷ್ಟ ಸಾಹಿತ್ಯದ ತಾಯಿ ಬೇರು. ನಮ್ಮ ಬದುಕಿನ ಜೀವಂತ ಚಿತ್ರಣವೇ ಜನಪದದಲ್ಲಿದೆ.ಜನಪದ ಹಾಡುಗಳು ಬಾಯಿಂದ ಬಾಯಿಗೆ ಹೋಗಿ ಉಳಿದು ಬಂದ ಸಾಹಿತ್ಯವಾಗಿದೆ. ಇವತ್ತಿನ ಆಧುನಿಕ ಡಿ.ಜೆ ಮತ್ತು ಅಶ್ಲೀಲ ಸಾಹಿತ್ಯದಿಂದ ಮೂಲ ಜನಪದ ಸಾಹಿತ್ಯ ಮರೆಯಾಗುತ್ತಿರುವುದು ವಿಷಾದನೀಯ ಎಂದರು.

ಸಂಸ್ಥೆಯ ನಿರ್ದೇಶಕರಾದ ಬಿ.ಬಿ. ಬೆಳಕೂಡ ಅವರು ವಿದ್ಯಾರ್ಥಿಗಳು ತಮ್ಮಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಂಡು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸರ್ವಾಂಗೀಣ ಪ್ರಗತಿ ಹೊಂದಬೇಕು ಎಂದರು. ಇನ್ನೋರ್ವ ನಿರ್ದೇಶಕ ಬಿ.ಎಸ್.ಕಡಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವಶ್ಯವಾಗಿರುವ ಮತ್ತಷ್ಟು ಸವಲತ್ತುಗಳನ್ನು ಒದಗಿಸಿಕೊಡಲು ಸಂಸ್ಥೆಯು ಕಟಿಬದ್ಧವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಕೈಗೊಳ್ಳುವ ಮೂಲಕ ತಂದೆ-ತಾಯಿಗಳ ಹಾಗೂ ಶಿಕ್ಷಣ ಸಂಸ್ಥೆಯ ಹೆಸರನ್ನು ಚಿರಸ್ಥಾಯಿಗೊಳಿಸಬೇಕು ಎಂದು ನುಡಿದರು.

ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಕೈಗೊಂಡಿದ್ದಾರೆ ಎಂದರು.

 ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಎಸ್.ಕಡಾಡಿ, ಬಿ.ಬಿ. ಬೆಳಕೂಡ, ಎಸ್.ಎಂ. ಖಾನಾಪೂರ, ಎಂ.ಎಸ್. ಕಪ್ಪಲಗುದ್ಧಿ, ಎಂ.ಡಿ. ಕುರಬೇಟ, ಬಿ.ಕೆ. ಗೋರೋಶಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಶಿಲ್ಪಾ ನಾಯಿಕವಾಡಿ, ದೈಹಿಕ ನಿರ್ದೇಶಕ ಬಿ.ಕೆ. ಸೊಂಟನವರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ಡಿ.ಎಸ್. ಹುಗ್ಗಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಎಂ.ಬಿ. ಕುಲಮೂರ, ಕ್ರೀಡಾ ಕಾರ್ಯಾಧ್ಯಕ್ಷ ಬಿ.ಬಿ. ವಾಲಿ, ಅಧ್ಯಾಪಕರುಗಳಾದ ಆರ್.ಎಸ್.ಪಂಡಿತ, ವಸುಂಧರಾ ಕಾಳೆ, ರಾಜಶ್ರೀ ತೋಟಗಿ, ಎಂ.ಆರ್.ಕರಗಣ್ಣಿ, ಮಲ್ಲಪ್ಪ ಮುರಗೊಡ, ಮುಸ್ತಪ್ಪ ಜಾಲಗಾರ, ಭೀಮಪ್ಪ ಮಾಳಿ, ಸಾಗರ ಅಡಿಮನಿ, ಸಂತೋಷ ಜೋಡಕುರಳಿ, ಬಂಡಿ, ರಘುನಾಥ ಮೇತ್ರಿ, ಕಛೇರಿ ಸಿಬ್ಬಂದಿ ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ ಇನ್ನಿತರರು ಉಪಸ್ಥಿತರಿದ್ದರು.

ಕುಮಾರಿ ಸಿಂಧೂ ನಾಯಿಕವಾಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಿ.ಎಸ್.ಹುಗ್ಗಿ ಸ್ವಾಗತಿಸಿದರು, ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು, ವಿಲಾಸ ಕೆಳಗಡೆ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group