ಬೀದರ: ಮಹಾರಾಷ್ಟ್ರ ದಿಂದ ಕರ್ನಾಟಕಕ್ಕೆ ಮಗಳ ಮನೆಗೆ ಬಂದ ವ್ಯಕ್ತಿಯೊಬ್ಬನಿಗೆ ಕೋವಿಡ್ ರೂಪಾಂತರಿ ಜೆಎನ್ – ೧ ತಗುಲಿದ ಬಗ್ಗೆ ವರದಿಯಾಗಿದೆ.
ಹೀಗೆ ಗಡಿ ಜಿಲ್ಲೆ ಬೀದರ ನಲ್ಲಿ ಪ್ರಥಮ ಕೋವಿಡ್ ರೂಪಾಂತರಿ ಸೊಂಕು ಪ್ರಕರಣ ಪತ್ತೆಯಾದಂತಾಗಿದೆ
ಮಹಾರಾಷ್ಟ್ರದ ಔರದ (ಶಾ) ಗ್ರಾಮದ ನಿವಾಸಿ 55 ವರ್ಷದ ವ್ಯಕ್ತಿಯು ಕರ್ನಾಟಕದ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮಕ್ಕೆ ಮಗಳ ಮನೆಗೆ ಆಗಮಿಸಿದ ವೇಳೆ ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆ ನಡೆಸಿದ್ದು ಸೊಂಕು ಪತ್ತೆಯಾಗಿದೆ.
ಭಾಲ್ಕಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ