ಸೆ.೨೬ ರಂದು ಚೈತನ್ಯ ಐಟಿಐ ಕೇಂದ್ರ ಉದ್ಯೋಗ ಮೇಳ

Must Read

ಮೂಡಲಗಿ: ಪಟ್ಟಣದ ಚೈತನ್ಯ ಸೋಶಿಯಲ್ ವೆಲ್ ಫೇರ್ ಸೊಸಾಯಿಟಿ ಚೈತನ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ(ಐಟಿಐ) ಸಭಾ ಭವನದಲ್ಲಿ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶಗಳನ್ನು ನೀಡುವ ಸಲುವಾಗಿ ನೇಮಕಾತಿಗಳನ್ನು ಮಾಡಿಕೊಳ್ಳಲು ಚೈತನ್ಯ ಐಟಿಐ ಮೂಡಲಗಿ ಹಾಗೂ ೧೦ ಕ್ಕಿಂತ ಹೆಚ್ಚಿನ ನ್ಯಾಶನಲ್, ಮಲ್ಟಿ ನ್ಯಾಶನಲ್ ಕಂಪನಿಗಳ ಸಹಯೋಗದಲ್ಲಿ ಶುಕ್ರವಾರ ಸೆ. ೨೬ ರಂದು ಬೆಳಿಗ್ಗೆ ೯:೦೦ ರಿಂದ ಸಾಯಂಕಾಲ ೫.೦೦ ಗಂಟೆಯವರೆಗೆ ಉದ್ಯೋಗ ಮೇಳ(ಕ್ಯಾಂಪಸ್ ಇಂಟರ್ವ್ಹಿವ್) ಆಯೋಜಿಸಲಾಗಿದೆ ಎಂದು ಚೈತನ್ಯ ಐಟಿಐ ಕೇಂದ್ರ ಪ್ರಾಚಾರ್ಯ ಸುನೀಲ ಕುಲ್ಲೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಬಿಎ, ಎಮ್.ಬಿ.ಎ, ಬಿಸಿಎ, ಎಂಎ, ಬಿಎಡ್, ಹಾಗೂ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಸಂದರ್ಶನಕ್ಕಾಗಿ ಬರುವ ಅಭ್ಯರ್ಥಿಗಳು ಬಯೋಡೇಟಾ(ರೆಸ್ಯೂಮ್) ಪ್ರತಿಗಳು, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಎಲ್.ಸಿ(ಟಿಸಿ) ಪ್ರತಿ ಮತ್ತು ವಿದ್ಯಾರ್ಹತೆಗನುಸಾರ ಹೊಂದಿದ ಪದವಿ, ಕೋರ್ಸುಗಳ ಸರ್ಟಿಫಿಕೇಟ್ಗಳ ಪ್ರತಿಗಳು, ಆಧಾರ ಕಾರ್ಡ ಪ್ರತಿಗಳು, ಪಾಸಪೋರ್ಟ ಸೈಜ ಪೋಟೋಗಳು, ಮೊಬೈಲ ನಂಬರ ಹಾಗೂ ಇ-ಮೇಲ್ ಐಡಿ ದಾಖಲಾತಿಗಳನ್ನು ತರಬೇಕು. ಆಸಕ್ತರು ಅಧಿಕ ಮಾಹಿತಿಗಾಗಿ ಮೊ- ೯೯೬೪೧೬೬೬೭೯, ೭೭೯೫೭೭೨೫೭೭, ಸಂಪರ್ಕಿಸಲು ಕೊರಲಾಗಿದೆ.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group