ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಜಿಲ್ಲಾ ಶೈಕ್ಷಣಿಕ ಸಮಾವೇಶದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಜ್ಯೋತಿ ಬಾ ಪುಲೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನಿಜಗುಣಯ್ಯ ಹೆಚ್ಎಸ್ ಪ್ರೌಢಶಾಲಾ ಶಿಕ್ಷಕರು ಮತ್ತು ಕವಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಇವರಿಗೆ ದೊರಕಿದೆ.
ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ ತಿಪಟೂರು ತಾ. ತುಮಕೂರು ಜಿಲ್ಲೆ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಇವರು ಮೂಲ ಹುಲ್ಲೇಕೆರೆ ಗ್ರಾಮದ ದಂಡಿನಶಿವರ ಹೋಬಳಿ ತುರುವೇಕೆರೆ ತಾಲ್ಲೂಕು ತುಮಕೂರು ಜಿಲ್ಲೆಯವರು ಇವರನ್ನು ಇವರು ನೀಡಿರುವ ಶಾಲಾ ಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದ್ದು21-01-2024 ರಂದು ವಿಜಯಪುರದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಗಣ್ಯರ ಅಮೃತ ಹಸ್ತದಿಂದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರಾದ ಜಿ ಎಸ್ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಜಗುಣಯ್ಯ ಹೆಚ್ ಎಸ್ ವ್ಯಕ್ತಿ ಪರಿಚಯ:
- ಹೆಚ್ಎಸ್ ನಿಜಗುಣಯ್ಯ
- ತಂದೆ ಸಿದ್ದರಾಮಯ್ಯ ಹೆಚ್ ಬಿ
- ತಾಯಿ ಸಿದ್ದಗಂಗಮ್ಮ
ಹುಲ್ಲೇಕೆರೆ ದಂಡಿನಶಿವರ ಹೋಬಳಿ ತುರುವೇಕೆರೆ ತಾಲ್ಲೂಕು ತುಮಕೂರು ಜಿಲ್ಲೆ ಪ್ರಾಥಮಿಕ ಶಿಕ್ಷಣ GHPS ಹುಲ್ಲೇಕೆರೆ ಪ್ರೌಢ ಹಾಗೂ ಕಾಲೇಜು ಶಿಕ್ಷಣ SBJC ಹುಲ್ಲೇಕೆರೆ ಪದವಿ ಶಿಕ್ಷಣ ಸಿದ್ದಗಂಗಾ ಕಾಲೇಜು ತುಮಕೂರು ಬಿ ಇಡಿ ಶಿಕ್ಷಣ ವಿಜಯ ಕಾಲೇಜು ಬೆಂಗಳೂರು. ಎಂ ಎ ಕನ್ನಡ ಮೈಸೂರು ಮುಕ್ತ ವಿಶ್ವವಿದ್ಯಾನಿಲಯ. ಎಂ ಎ ರಾಜ್ಯಶಾಸ್ತ್ರ ಬೆಂಗಳೂರು ವಿಶ್ವವಿದ್ಯಾನಿಲಯ ಸರ್ಕಾರಿ ಸೇವೆಗೆ ಸೇರಿದ್ದು 4/6/2012 ರಲ್ಲಿ ಮೊದಲು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೂವಿನಕಟ್ಟೆ ಗುಬ್ಬಿ ತಾ ಇಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಸಮಾಜ ಕಲ್ಯಾಣ ಇಲಾಖೆಯ kreis ನ ರಾಜ್ಯ ಮಟ್ಟದ ಸರ್ಕಾರದ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಮೊರಾರ್ಜಿ ಪಿಯು ಕಾಲೇಜು ಬಸವನಹಳ್ಳಿ ಕುಶಾಲನಗರ ತಾ ಕೊಡಗು ಜಿಲ್ಲೆ ಇಲ್ಲಿ ಕನ್ನಡ ಉಪನ್ಯಾಸಕನಾಗಿ, ಇದೀಗ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ ಇಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ತಿಪಟೂರು ತುಮಕೂರು ಜಿಲ್ಲೆ ಪ್ರೌಢಶಾಲಾ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ 12 ವರ್ಷಗಳ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ಸೇವೆಯಲ್ಲಿ ಶಿಕ್ಷಕನಾಗಿ ಉಪನ್ಯಾಸಕನಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ತಿಪಟೂರು ತಾಲೂಕಿನಲ್ಲಿ ಕೋವಿಡ್ ನೋಡಲ್ ಆಗಿ ಇನ್ಸಿಡೆಂಟ್ commander ಆಗಿ ಸೇವೆ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ. sslc ವಿದ್ಯಾರ್ಥಿಗಳಿಗೆ ತುಮಕೂರು, ಗದಗ, ಬಳ್ಳಾರಿ, ವಿಜಯನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ದಾವಣಗೆರೆ, ಬೀದರ್, ಬೆಳಗಾವಿ, ಕೊಡಗು, ಉಡುಪಿ ಹಲವಾರು ಜಿಲ್ಲೆಗಳಿಗೆ ಭಾನುವಾರ ಭೇಟಿ ನೀಡಿ ಉಚಿತ ಪರೀಕ್ಷಾ ಭಯ ನಿವಾರಣೆ .ಆತ್ಮ ಸ್ಟೈರ್ಯ ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ವಿಧಾನ ಕುರಿತು ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ಗಿಡಮರ ಬೆಳೆಸುವುದು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪ್ರೇರಿಪಿಸುವುದು.ಕವಿಯಾಗಿ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದು. ಹಲವಾರು ಶಿಕ್ಷಕರಿಗೆ ನಡೆಸುವ ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ. ಶಿಕ್ಷಕರಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ದ್ದಾರೆ. ಈವರೆಗೆ
- ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ(ಬೆಂಗಳೂರು)
- ರಾಜ್ಯಮಟ್ಟದ ಶಿಕ್ಷಣ ರತ್ನ.(ಬೆಂಗಳೂರು)
- ರಾಜ್ಯ ಮಟ್ಟದ ಶಿಕ್ಷಕ ರತ್ನ. ,(ವಿಜಯನಗರ ಜಿಲ್ಲೆಯ ಹಂಪಿ
- ರಾಜ್ಯ ಮಟ್ಟದ ಆದರ್ಶ ಶಿಕ್ಷಕ. (ಮಂಡ್ಯ)
- ರಾಜ್ಯ ಮಟ್ಟದ ಗುರುಕುಲ ವಿದ್ಯಾ ರತ್ನ(ಹಂಪಿ) 6
- ಅಂತಾರಾಷ್ಟ್ರೀಯ ಮಟ್ಟದ ಗುರು ತಿಲಕ.(ಬೆಳಗಾವಿ)
- ರಾಜ್ಯ ಮಟ್ಟದ ಕರುನಾಡ ರಕ್ಷಕ(ಬೆಂಗಳೂರು)
- ರಾಜ್ಯ ಮಟ್ಟದ ಅಭಿರುಚಿ ಶಿಕ್ಷಣ ರತ್ನ(ಮೈಸೂರು)
- ರಾಷ್ಟ್ರೀಯ ಶಿಕ್ಷಣ ರತ್ನ (ಹುಬ್ಬಳ್ಳಿ)2024
- ಚಾಲುಕ್ಯ ರತ್ನ ಇಮ್ಮಡಿ ಪುಲಿಕೇಶಿ (ಬಾದಾಮಿ)2024
- ಕನ್ನಡ ಅಭಿಮಾನಿ ಸಂಘದ ಕನ್ನಡ ರಾಜ್ಯೋತ್ಸವ2024 ಪ್ರಶಸ್ತಿ (ಬೆಂಗಳೂರು) (ಈ 3 ಪ್ರಶಸ್ತಿ ಸ್ವೀಕರಿಸಬೇಕು,) ಉಳಿದ ಪುರಸ್ಕಾರಗಳು ಸಂದಿವೆ.