ಇದೇ ೨೪ರಂದು ರವಿವಾರ ಚಿತ್ರದುರ್ಗದ ತರಾಸು ಭವನದಲ್ಲಿ ನಡೆಯುತ್ತಿರುವ ಪ್ರಥಮ ಅಖಿಲ ಕರ್ನಾಟಕ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಖ್ಯಾತ ಸಾಹಿತಿಗಳಾದ ಜ್ಯೋತಿ ಬದಾಮಿ ಅವರು ಆಯ್ಕೆ ಯಾಗಿದ್ದಾರೆ.ಮೂಲತ ದಾಣಗೆರೆಯವರಾದ ಜ್ಯೋತಿ ಬದಾಮಿ ಯವರು ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ,ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಲಿಂಗಾಯತ ಮಹಿಳಾ ಸಮಾಜ, ಲಿಂಗಾಯತ ಸಂಘಟನೆ,ದಾವಣಗೆರೆ ಕರ್ನಾಟಕ ಲೇಖಕಿಯರ ಸಂಘ,ವನಿತಾ ಸಾಹಿತ್ಯ ಸಮಾಜ ದಾವಣಗೆರೆ,ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಘಟಕ ಹಾಗು ಅಖಿಲ ಭಾರತ ಕವಿಯತ್ರಿ ಯರ ಸಂಘ, ಭುವನೇಶ್ವರಿ ಉತ್ಸವ ಸಮಿತಿ, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳ ವತಿಯಿಂದ ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದ್ದಾರೆ.