spot_img
spot_img

ಸಂಸದರ ನಿಧಿಯಲ್ಲಿ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿದ ಕಡಾಡಿ

Must Read

spot_img
- Advertisement -

ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಕಲ್ಲೋಳಿ ಇಂದು ಪಟ್ಟಣವಾಗಿ ಬೆಳೆದು ನಿಂತಿದೆ. ಈ ಪಟ್ಟಣಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿ ಎಲ್ಲ ಚುನಾಯಿತ ಪ್ರತಿನಿಧಿಗಳ ಮೇಲಿದೆ ಅದರ ಭಾಗವಾಗಿ ಪಟ್ಟಣದ ಸಾಂಸ್ಕೃತಿಕ, ಸಾಮಾಜಿಕ, ವೈವಾಹಿಕ, ಇನ್ನಿತರ ಚಟುವಟಿಕೆಗೆ ಉಪಯೋಗಿಸಿಕೊಳ್ಳಲು ಒಂದು ಸುಸಜ್ಜಿತವಾದ ಸಮುದಾಯ ಭವನದ ಅವಶ್ಯಕತೆಯನ್ನು ಮನಗಂಡು ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ನ- 14ರಂದು ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣದ ಯುವಕರಿಗೆ ಅವಶ್ಯಕತೆ ಇರುವ ಗರಡಿ ಮನೆ, ಯುವಕರ ಜ್ಞಾನದ ವಿಕಾಸಕ್ಕಾಗಿ ಸುಸಜ್ಜಿತವಾದ ವಾಚನಾಲಯ, ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಜಿಮ್ ಸೌಲಭ್ಯ, ಶೌಚಾಲಯ ಈ ರೀತಿ ಹಲವಾರು ಸವಲತ್ತುಗಳನ್ನು ಕೊಡುವ ಮೂಲಕ ಈ ಪಟ್ಟಣದ ಶ್ರೇಯೋಭಿವೃದ್ದಿಗಾಗಿ ಒಬ್ಬ ಸಂಸದನಾಗಿ ನನ್ನ ಕೊಡುಗೆಯನ್ನು ನೀಡಿದ್ದೇನೆ ಎಂದರಲ್ಲದೇ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಪರವಾದ ಕಾರ್ಯಗಳನ್ನು ಕೈಗೊಳ್ಳಲು ಕಲ್ಲೋಳಿ ಪಟ್ಟಣದ ಎಲ್ಲ ಹಿರಿಯರು ಸಹಕಾರ ನೀಡಬೇಕೆಂದು ವಿನಂತಿಸಿದರು.

- Advertisement -

ಹಾಲುಮತದ ಮುಖಂಡರಾದ ಭೀಮಪ್ಪ ಮಾಯನ್ನವರ ಹಾಗೂ ಲಕ್ಷ್ಮಿ ದೇವಿ ದೇವಸ್ಥಾನದ ಪೂಜೇರಿ ಭೂತು ಮಾಯನ್ನವರ ಅವರು ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದ ಹಿರಿಯರಾದ ಭೀಮಪ್ಪ ಕಡಾಡಿ ಹಾಗೂ ಬಸವಣ್ಣಿ ಗೋರೋಶಿ ಗುದ್ದಲಿ ಪೂಜೆ ನೆರವೇರಿಸಿದರು. ಮೃತ್ಯುಂಜಯ ಹಿರೇಮಠ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಪಟ್ಟಣದ ಪ್ರಮುಖರಾದ ಪರಗೌಡ ಪಾಟೀಲ, ಶಂಕರ ಬೆಳಕೂಡ, ಶಿವರುದ್ರ ಬಿ.ಪಾಟೀಲ, ಫಕೀರಪ್ಪ ಕಡಾಡಿ, ಸಿದ್ದಪ್ಪ ಖಾನಾಪೂರ, ಬಸವರಾಜ ಕಡಾಡಿ, ಪುಂಡಲಿಕ ಬ.ಪಾಟೀಲ, ಹಣಮಂತ ಬ.ಪಾಟೀಲ, ಬಸಗೊಂಡ ಪರಕನಟ್ಟಿ, ಶ್ರೀಶೈಲ ತುಪ್ಪದ, ಭೀಮರಾಯ ಕಡಾಡಿ, ಶಿವಪ್ಪ ಬಿ.ಪಾಟೀಲ, ಗೋವಿಂದ ಕಡಾಡಿ, ಬಾಳೇಶ ಕಂಕಣವಾಡಿ, ಪ್ರಭು ಕಡಾಡಿ, ಅಡಿವೆಪ್ಪ ಕುರಬೇಟ, ಶಂಕರ ಗೋರೋಶಿ, ಮಲ್ಲಪ್ಪ ಖಾನಗೌಡರ, ಜಗದೀಶ ಗೊರಗುದ್ದಿ, ಮಾರುತಿ ಹೂಗಾರ, ಪರಪ್ಪ ಮಳವಾಡ, ಸುಭಾಸ ಪೂಜೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group