spot_img
spot_img

ಬೆಳಗಾವಿ ಸಂಸದರಿಗೆ ಮಾಹಿತಿ ಕೊರತೆ ಎಂದ ಸಚಿವ ಲಾಡ್ ಗೆ ಟಾಂಗ್ ಕೊಟ್ಟ ಕಡಾಡಿ

Must Read

spot_img
- Advertisement -

ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ. ನಿಮ್ಮ ಆದೇಶಕ್ಕೆ ನೀವು ಬದ್ಧರಾಗಿ – ಈರಣ್ಣ ಕಡಾಡಿ

ಬೆಳಗಾವಿ:ಕೇಂದ್ರ ಸರ್ಕಾರ 2023 ಫೆಬ್ರವರಿಯಲ್ಲಿ ಬೆಳಗಾವಿಗೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಸಂಸದರಿಗೆ ಮಾಹಿತಿ ಕೊರತೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಈ ವಿಷಯವನ್ನು ಮಾಧ್ಯಮದವರ ಮೂಲಕ ತಿಳಿಸುತ್ತಿದ್ದೇನೆ ಎಂದು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿಯವರು, ಕಾರ್ಮಿಕ ಸಚಿವರು ಹೇಳಿಕೆ ಕೊಡುತ್ತಿರುವುದು ಫೆಬ್ರುವರಿ 2025 ರಲ್ಲಿ ಎನ್ನುವುದನ್ನು ನೆನಪಿಸುತ್ತೇನೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕೆ ಏನು ತೊಡಕಾಯಿತು ಯಾಕೆ ತಡವಾಯಿತು ಎನ್ನುವುದನ್ನು ಸಚಿವರು ಜನರಿಗೆ ಹೇಳಬೇಕಾಗುತ್ತದೆ. ಪ್ರಾರಂಭದಲ್ಲಿ ಸಚಿವರು ಈ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಇಲ್ಲಿಯ ಜಾಗವನ್ನು ಖಾಲಿ ಮಾಡುವ ನಿರ್ಣಯವನ್ನು ಮಾಡಿದರು. ನಾನು ಅದಕ್ಕೆ ಒಪ್ಪಿದೆ. ಟೆಂಡರ್ ಕೂಡ ಆಯ್ತು. ಕಟ್ಟಡ ಮಾಲೀಕ ಒಪ್ಪಿಗೆ ನೀಡಿ ಎಲ್ಲ ಸಿದ್ದತೆ ಮಾಡುತ್ತಿದ್ದ. ಸಚಿವರ, ಅಧಿಕಾರಿಗಳ ಚಿತಾವಣೆಯಿಂದ ಆ ಕಟ್ಟಡದ ಮಾಲೀಕನಿಗೆ ತೊಂದರೆ ಆಯಿತು ಅಂತ ಹೇಳಿ ಅದನ್ನು ವಾಪಸ್ ತೆಗೆದುಕೊಂಡ. ಅದಾದ ನಂತರ ಮತ್ತೆ ಸಚಿವರು ನಿರ್ಣಯ ಮಾಡಿ, ಆದೇಶ ಮಾಡಿದರು. ಇರುವಂತಹ ಆಸ್ಪತ್ರೆ ಎಲ್ಲಾ ವೈದ್ಯಾಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಬೇಕು. ಯಮುನಾಪುರದಲ್ಲಿ ಓ ಪಿ ಡಿ ಪ್ರಾರಂಭ ಮಾಡಬೇಕು ಅಂತ ಸಚಿವರು ಆದೇಶ ಹೊರಡಿಸಿದರು.ಆದರೂ ಅದಕ್ಕೂ ಒಪ್ಪಿಕೊಂಡೆವು.

- Advertisement -

ಅದಾದ ಮೇಲೆ ನಾವು ತಕ್ಷಣ ಸ್ಥಳೀಯ ಶಾಸಕರ ವಿನಂತಿಯ ಮೇರೆಗೆ ಆದೇಶವನ್ನು ವಾಪಸ್ ಪಡೆದು, ಮತ್ತೊಂದು ಸಲ ಸಚಿವರು ಬಾಡಿಗೆ ಕಟ್ಟಡವನ್ನು ಹುಡುಕಲು ಹೇಳಿದರು.ಈ ರೀತಿ ಈ ಕೆಲಸ ಮಾಡಲಿಕ್ಕೆ ಕಳೆದ ಎರಡು ವರ್ಷಗಳಿಂದ ವಿಳಂಬವಾಗುತ್ತಿದೆ. ಇದರ ಬಗ್ಗೆ ನಾನು ಸಚಿವರ ಗಮನವನ್ನು ಸೆಳೆಯಬೇಕೆಂದು ಬಹಳಷ್ಟು ಸಲ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನ ಮಾಡಿದೆ. ಅವರು ಸಿಗಲಿಲ್ಲ. ನಾನು ಬೆಂಗಳೂರಿನಲ್ಲಿ ಭೇಟಿಯಾಗಲು ಪ್ರಯತ್ನ ಮಾಡಿದೆ. ಸಚಿವರು ಸಿಕ್ಕಿಲ್ಲ. ಆಮೇಲೆ ಬೆಳಗಾವಿ ಸುವರ್ಣ ವಿಧಾನಸೌಧ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೇವಲ ಇದೇ ವಿಷಯಕ್ಕಾಗಿ ನಾನು ದೆಹಲಿಯಿಂದ ಅಧಿವೇಶನ ಪ್ರಾರಂಭವಿದ್ದರೂ ಕೂಡ ನಾನು ಅಲ್ಲಿಂದ ವಾಪಸ್ ಬಂದು ಸಚಿವರೊಂದಿಗೆ ಮಾತನಾಡಲು ಪ್ರಯತ್ನ ಮಾಡಿದೆ. ಆದರೂ ಸರಿಯಾಗಿ ಅದನ್ನು ಕೇಳಿಸಿಕೊಳ್ಳದ ವ್ಯವಧಾನ ಕೂಡ ಸಚಿವರಲ್ಲಿ ಇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹೀಗಾಗಿ ನನಗೆ ತುಂಬಾ ಬೇಸರವಾಯಿತು. ಸಚಿವರ ಆಪ್ತ ಕಾರ್ಯದರ್ಶಿಗೆ ಆ ಎಲ್ಲಾ ಸಂಗತಿಗಳು ಗೊತ್ತಿವೆ.ನಾನು ಅವರಿಗೂ ಕೂಡ ಹಲವಾರು ಬಾರಿ ಫೋನಿನಲ್ಲಿ ಹೇಳಿದ್ದೆ. ಇತ್ತೀಚೆಗೆ ಅವರು ಕೂಡ ಫೋನ್ ತೆಗೆದುಕೊಳ್ಳುತ್ತಿಲ್ಲ ಹೀಗಾಗಿ ಕೊನೆಗೆ ಅನಿವಾರ್ಯವಾಗಿ ಜನರಿಗೆ ಯಾಕೆ ವಿಳಂಬವಾಗುತ್ತಿದೆ ಎನ್ನುವಂತಹ ನೀತಿಯನ್ನು ನಾನು ಮಾಧ್ಯಮದ ಮೂಲಕ ಹೇಳುವಂತ ಅವಶ್ಯಕತೆಯಾಯಿತು.
ಹೀಗಾಗಿ ತಾವು ಬೆಳಗಾವಿಗೆ ಬಂದಂಥ ಸಂದರ್ಭದಲ್ಲಿ ತಾವು ಸ್ಪಷ್ಟೀಕರಣ ಕೊಟ್ಟಿದಿರಿ ನನಗೆ ಮಾಹಿತಿ ಕೊರತೆ ಇದೆ ಅಂತ ಹೇಳಿ. ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ನಾನು ಪತ್ರಿಕಾಗೋಷ್ಠಿಯನ್ನು ಮಾಡಿದ್ದೇನೆ ನಾನು ಅಭಿವೃದ್ಧಿ ಕಾರ್ಯಗಳಿಗೆ ಯಾವತ್ತೂ ಕೂಡ ರಾಜಕಾರಣ ಮಾಡುವಂಥ ವ್ಯಕ್ತಿಯಲ್ಲ. ಹೀಗಾಗಿ ಮತ್ತೊಂದು ಬಾರಿ ನಾನು ನಿಮಗೆ ವಿನಂತಿಯನ್ನು ಮಾಡುತ್ತೇನೆ.ತಾವೇನು ಆದೇಶ ಮಾಡಿದ್ದೀರಿ ಆ ಆದೇಶಕ್ಕೆ ಕಟ್ಟಿಬದ್ಧವಾಗಿ ತಮ್ಮ ಕೆಳಗೆ ಕೆಲಸ ಮಾಡುವಂತಹ ಅಧಿಕಾರಿಗಳ ಮಾತಿನಲ್ಲಿ ಎಷ್ಟು ಸತ್ಯಾಂಶ ಇದೆ ಎನ್ನುವುದು ಅರ್ಥ ಮಾಡಿಕೊಂಡು ತಮಗೆ ತಪ್ಪು ಸಂದೇಶ ಬಂದಿದೆ ಅದನ್ನು ನಿವಾರಣೆ ಮಾಡಿಕೊಂಡು ಬೇಗ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿಕ್ಕೆ ತಾವು ಅನುಕೂಲ ಮಾಡಿಕೊಡಬೇಕಾಗಿ ಅಂತ ಬೆಳಗಾವಿ ಜಿಲ್ಲೆಯ ಜನತೆ ಪರವಾಗಿ ನಾನು ಮತ್ತೊಮ್ಮೆ ತಮ್ಮಲ್ಲಿ ವಿನಂತಿ ಮಾಡುತ್ತೇನೆ ಎಂದು ಈರಣ್ಣ ಕಡಾಡಿ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ವಾವಲಂಬಿಗಳಾಗಿ ಉತ್ತಮ ಜೀವನ ಸಾಗಿಸಿ: ವಿದ್ಯಾರ್ಥಿಗಳಿಗೆ ಎನ್.ಆರ್. ಠಕ್ಕಾಯಿ ಕರೆ

ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಹೇಳಿದರು. ತಾಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group