ಜೈಕಿಸಾನ್ ರೈತ ದಿನಾಚರಣೆಗೆ ಬಸವರಾಜ ಕಡಾಡಿ ಚಾಲನೆ

Must Read

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಪಿಕೆಪಿಎಸ್ ಸಭಾಂಗಣದಲ್ಲಿ ಮಂಗಳವಾರ ಡಿ-23 ರಂದು ನಡೆದ ಜೈ ಕಿಸಾನ್ ದಿವಸ ರೈತ ದಿನಾಚರಣೆಯನ್ನು ನಮ್ಮ ರೈತ,ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಬಸವರಾಜ ಕಡಾಡಿ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಮಾಜಿ ಪ್ರಧಾನ ಮಂತ್ರಿ ಚೌದರಿ ಚರಣಸಿಂಗ ಅವರು ಭಾರತದ ರೈತರು ಹಾಗೂ ಗ್ರಾಮೀಣ ಜನರ ಹಿತಕ್ಕಾಗಿ, ಭೂ ಸುಧಾರಣೆಗಳಿಗಾಗಿ ಹೋರಾಡಿದ ನಾಯಕರೆಂದು ಹೆಸರುವಾಸಿಯಾಗಿದ್ದಾರೆ ಅವರ ಹೆಸರಿನಲ್ಲಿ ರೈತ ದಿನಾಚರಣೆ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ ಎಂದರು. ರೈತರು ಸಾವಯವ ಕ್ರಷಿಗೆ ಹೆಚ್ಚು ಮಹತ್ವ ಕೊಡಬೇಕು,ರಸಗೊಬ್ಬರ ಬಳಕೆ ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅರಭಾವಿ ಕೃಷಿ ಅಧಿಕಾರಿ ಪರಸಪ್ಪ ಹುಲಗಬಾಳಿ ಮಾತನಾಡಿ ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸೆಗಣಿ ಗೊಬ್ಬರ ಬಳಕೆಗೆ ಮಹತ್ವ ನೀಡಬೇಕು, ಪ್ರತಿಯೊಬ್ಬ ರೈತರು ಹೆಚ್ಚು ಬೆಳೆಗಳು ತೆಗೆಯಬೇಕೆಂದರೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು.

ಕೃಷಿ ಇಲಾಖೆಯ ಸವಲತ್ತುಗಳ ಬಗ್ಗೆ ರೈತರಿಗೆ ತಿಳಿಸಿದರು. ರೈತರು ಸಣ್ಣರೈತರಿಗೆ ಅನುಕೂಲವಾಗು ಯೋಜನೆಗಳಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು. ಜುವಾರಿ ಕಂಪನಿ ಅಧಿಕಾರಿ ಕ್ರಷ್ಣಾ ಕುಲಕರ್ಣಿ,ಶ್ರೀಕಾಂತ ಹುಣಸಿಕಟ್ಟಿ ಮಾತನಾಡಿದರು

ಪ್ರಗತಿ ಪರ ರೈತರಾದ ಪ್ರಭು ಕಡಾಡಿ, ರಮೇಶ ಕಡಲಗಿ,ಅಡಿವೆಪ್ಪ ಕುರಬೇಟ,ಆನಂದ ಹೆಬ್ಬಾಳ,ಕಿರಣ ಕಡಾಡಿ,ತುಕಾರಾಮ ಪಾಲ್ಕಿ,ಸಿದ್ದಪ್ಪ ಹೆಬ್ಬಾಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಹುಬ್ಬಳಿ ಪಾರಾದೀಪ್ ಫಾಸ್ಪೇಟ್ ಹಾಗೂ ಜುವಾರಿ ಫಾರ್ಮಹಬ್,ಶ್ರೀ ಅಲ್ಲಮಪ್ರಭು ಫರ್ಟಿಲೈಜರ್ ಕಲ್ಲೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
ರಾಹುಲ ಕಡಾಡಿ ಸ್ವಾಗತಿಸಿದರು,ಮಲ್ಲಿಕಾರ್ಜುನ ಜಕಾತಿ ಕಾರ್ಯಕ್ರಮ ನಿರೂಪಿಸಿದರು.ಆನಂದ ಬಿಳಗಿ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group