ಘಟಪ್ರಭಾ: ಹಿಡಕಲ್ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ದನ – ಕರುಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ರೈತ ಸಂಘಟನೆ, ರೈತರು ಘಟಪ್ರಭಾ ಮ್ರತ್ಯುಂಜಯ ಸರ್ಕಲ್‌ದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದರು.
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಈ ಸಂದರ್ಭದಲ್ಲಿ ಚಿಕ್ಕೋಡಿಯಿಂದ ಬೈಲಹೊಂಗಲ ಪಟ್ಟಣಕ್ಕೆ ತೆರಳುತ್ತಿರುವ ಸಮಯದಲ್ಲಿ ರೈತರ ಪ್ರತಿಭಟನೆ ನೋಡಿ ವಾಹನದಿಂದ ಕೆಳಗೆ ಇಳಿದು ಪ್ರತಿಭಟನೆಯ ವಿಷಯ ತಿಳಿದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ,ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳೊಂದಿಗೆ ಮಾತನಾಡಿದರು.
ಬೆಳಿಗ್ಗೆಯಿಂದ ರೈತರು, ರೈತ ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಸಂಸದರು ಒಂದು ತಾಸು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರನ್ನು ಸಮಾಧಾನ ಪಡಿಸಿದರು.
ಸಂಸದ ಈರಣ್ಣ ಕಡಾಡಿ ಅವರು ಸದಾ ರೈತರ ಬಗ್ಗೆ ಕಳಕಳಿ, ಕಾಳಜಿ ಹೊಂದಿದವರು, ರೈತರ ಹೋರಾಟಕ್ಕೆ ಹೆಗಲು ಕೊಡುವ ಗುಣ ಇವರದು, ಬೇಗ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಬಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನತೆ, ದನ ಕರುಗಳಿಗೆ ನೀರು ನೀಡಬೇಕೆಂದು ಹೇಳಿದರು.
ರೈತ ಸಂಘಟನೆಯ ಚೂನಪ್ಪ ಪೂಜೇರಿ, ಶ್ರೀಶೈಲ ಅಂಗಡಿ ಸೇರಿದಂತೆ ಅನೇಕರು ಇದ್ದರು