ಸವದತ್ತಿ : ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮೂಲಕ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದ ತಾಲೂಕಿನ ವಿರಳ ಸಾಹಿತಿ ವೈ ಬಿ ಕಡಕೋಳ.ಇವರು ಶೈಕ್ಷಣಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಶಿಕ್ಷಕರಾಗಿ ಅರಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರಾಗಿ 40ಕ್ಕೂ ಹೆಚ್ಚು ಪುಸ್ತಕ ಬರೆದ ಶಿಕ್ಷಕ ಸಾಹಿತಿಯಾಗಿದ್ದು ಇವರು ನಮ್ಮ ತಾಲೂಕಿನ ಹೆಮ್ಮೆ ಎಂದು ಶಿಕ್ಷಕ ಪ್ರಶಾಂತ ಹಂಪನ್ನವರ ಹೇಳಿದರು.
ಅವರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪಡೆದ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ,ಎನ್,ಬ್ಯಾಳಿ. ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ,ವ್ಹಿ.ಸಿ.ಹಿರೇಮಠ,ರತ್ನಾ ಸೇತಸನದಿ,ವಿನೋದ ಹೊಂಗಲ,ಮಲ್ಲಿಕಾರ್ಜುನ ಹೂಲಿ,ನೀಲಕಂಠ ಲಂಗೂಟಿ, ಶಂಕರ ಅಪ್ಪೋಜಿ,ಈರಣ್ಣ ಅವರಾದಿ,ಶಿಕ್ಷಕರಾದ ಚಂದ್ರಕಾಂತ ಸಿದ್ದಸಮುದ್ರ,ದೈಹಿಕ ಶಿಕ್ಷಕರಾದ ರಮೇಶ ಹಲಗಿ ಗುರ್ಲಹೊಸೂರಿನ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಪ್ಪ ಮೊದಲಾದವರು ಉಪಸ್ಥಿತರಿದ್ದರು.
ರತ್ನಾ ಸೇತಸನದಿ ಸ್ವಾಗತಿಸಿದರು.ವಿನೋದ ಹೊಂಗಲ ನಿರೂಪಿಸಿದರು.ಮಲ್ಲಿಕಾರ್ಜುನ ಹೂಲಿ ವಂದಿಸಿದರು.