ಮೈಸೂರಿನ ಸೆಂಟ್ ಅರ್ನಾಲ್ಡ್ ಸೆಂಟ್ರಲ್ ಶಾಲೆಯಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾಲಿನಿ ಕೃಷಾ.ಪಿ ಅವರು ಜನವರಿ ತಿಂಗಳಲ್ಲಿ ಮಾರಿಷಸ್ ಬೋಯಿಸ್ ಮಾರ್ಚಾಂಡ್‌ನಲ್ಲಿರುವ ಗುರುಕುಲ್ ಶಿಕ್ಷಣ ಕೇಂದ್ರದಲ್ಲಿ “ವಿಶ್ವ ಹಿಂದಿ ದಿನಾಚರಣೆಯ” ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ ಜನಪದ ಶೈಲಿಯ ನೃತ್ಯದಲ್ಲಿ ಭಾಗವಹಿಸಿ ಅಲ್ಲಿನ ಆರೋಗ್ಯ ಸಚಿವರಾದ ರಂಜಿವ್‌ವೂಜಿತ್ ಅವರಿಂದ ಕಲಾರತ್ನ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ರಾಷ್ಟ್ರಪತಿಗಳಾದ ಧರ್ಮಬೀರ್ ಗೋಕೂಲ್ ಉಪಸ್ಥಿತರಿದ್ದರು. ಯಾಲಿನಿ ಕೃಷಾ.ಪಿ ಅವರ ತಂದೆ ಪ್ರಶಾಂತ, ತಾಯಿ ಸುಶ್ಮಿತಾ ಪ್ರಶಾಂತ್ ರವರುಗಳು ಇದ್ದರು.

