ಬಾಗಲಕೋಟೆ,,: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಆರಾಧ್ಯ ದೈವ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತಮಹೋತ್ಸವದ ಹಿನ್ನೆಲೆಯಲ್ಲಿ ಕೊನೆಯ ದಿನವಾದ ದಿ. 19 ರಂದು ಬುಧವಾರ ವಿವಿಧ ಪತ್ರಿಕೆಗಳ ಮೂಲಕ ಪ್ರಸಾರ ಮಾಡಿದ ಪತ್ರಿಕಾ ಪ್ರತಿನಿಧಿಗಳಿಗೆ ಗೌರವ ಸತ್ಕಾರ ಮಾಡಲಾಯಿತು.
ಸಂಗಮೇಶ ಸಿನ್ನೂರು (ಸಂಯುಕ್ತ ಕರ್ನಾಟಕ ), ವಿಜಯ್ ಸಿಂಗದ (ವಿಜಯ ಕರ್ನಾಟಕ ), ಬಸವರಾಜ್ ನಿಡಗುಂದಿ ಪ್ರಜಾವಾಣಿ ), ಶಿವು ಕುಮಚಗಿ (ಹೊಸದಿಗಂತ ), ಹರ್ಷ ದೇಸಾಯಿ (ಉದಯವಾಣಿ ), ಪ್ರಕಾಶ್ ಗುಳೇದಗುಡ್ಡ (ವಿಜಯವಾಣಿ ), ಶಬ್ಬೀರ್ ಬಿಜಾಪುರ (ಹೈದರಾಬಾದ್ ಕರ್ನಾಟಕ ), ಸುನಿಲ್ ಮಾರಬಸರಿ (ಸಂಜೆ ದರ್ಶನ , ಶಂಕರ್ ವನಕೆ (ಖಡಕ್ ಕನ್ನಡ ಡಿಜಿಟಲ್ ನ್ಯೂಸ್ ), ನಿಂಗಪ್ಪ ಕಡ್ಲಿಮಟ್ಟಿ (ಶೋಧಕ ಡಿಜಿಟಲ್ ನ್ಯೂಸ್ ), ಮಹೇಶ ಸರಗನಾಚಾರಿ (ಉದಯ ವಿಜಯ), ಅಶೋಕ್ ಸಿಂಗದ( ಕನ್ನಡಪ್ರಭ) ಇವರನ್ನು ಶ್ರೀ ಮಠದ ಉತ್ಸವದ ಸಮಿತಿಯಿಂದ ಶ್ರೀ ಮಠದ ಪೂಜ್ಯರಾದ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಡಾ. ಅಮರಸಿದ್ದೇಶ್ವರ ಸ್ವಾಮಿಜಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಮ್ ಆಯ್ ಕಡ್ಲಿಮಟ್ಟಿ ವಕೀಲ ನಬಿ ತಹಶೀಲ್ದಾರ್ ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಹಾಗೂ ಗಣ್ಯರು ಉಪಸ್ಥಿತರಿದ್ದರು