ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Must Read

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಕನಕದಾಸರ ಜೀವನ ಹಾಗೂ ಸಂದೇಶಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು  ಹೇಳಿದರು. ಕೀರ್ತನೆಗಳ ಮೂಲಕ ಸರಳವಾದ ಭಾಷೆಯಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿ ಎತ್ತಿದ ಕನಕದಾಸರು ಇಂದಿಗೂ ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಾದ ಲಕ್ಷ್ಮೀ ಶೀಗಿಹಳ್ಳಿ, ಕಾವೇರಿ ಜಡಗಣ್ಣವರ, ಸುಪ್ರಿಯಾ ಕುಲಕರ್ಣಿ, ರಂಜಿತಾ ಮಾದರ ಕನಕದಾಸರ ಜೀವನ, ತತ್ವಗಳ ಕುರಿತು ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ವಿರೇಂದ್ರ ಪಾಟೀಲ, ಸುಮಂಗಲಾ ಹತ್ತರಕಿ ಉಪಸ್ಥಿತರಿದ್ದರು. ಪೃಥ್ವಿ ಗರಗದ ಸ್ವಾಗತಿಸಿ ನಿರೂಪಿಸಿದರು. ಕಾವೇರಿ ಸೊಗಲದ ವಂದಿಸಿದರು.

Latest News

ಬೆಳಗಾವಿಯಿಂದ ಉಡಾನ್ ಸೇವೆ ಪುನಾರಂಭಿಸಲು ಕಡಾಡಿ ಮನವಿ

ಮೂಡಲಗಿ:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಉಡಾನ್ ಯೋಜನೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳಿಗೆ ಈ ಮೊದಲು ವಿಮಾನಯಾನ ಸಂಸ್ಥೆಗಳು ಒದಗಿಸುತ್ತಿದ್ದ...

More Articles Like This

error: Content is protected !!
Join WhatsApp Group