ಬೀದರ – ಕನೇರಿಯ ಕಾಡಸಿದ್ಧೇಶ್ವರ ಸ್ವಾಮಿಗೆ ಕಾಮಾಲೆಯಾಗಿದೆ. ಹುಚ್ಚು ನಾಯಿಯಂತೆ ಬಡಬಡಿಸುತ್ತಿದ್ದಾರೆ ಅವರು ನಿಜವಾದ ಸ್ವಾಮಿಯಲ್ಲ ಎಂದು ಹುಲಸೂರಿನ ಶಿವಾನಂದ ಸ್ವಾಮಿಗಳು ಕಿಡಿ ಕಾರಿದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯರಾಗಿದ್ದರೂ ಅವರ ಗುಣಗಳನ್ನು ಅಳವಡಿಸಿಕೊಳ್ಳದ ಕನೇರಿ ಶ್ರೀಗಳ ಮಾತುಗಳು ಅವಿವೇಕತನದಿಂದ ಕೂಡಿದೆ.ಅವರು ಬುದ್ಧಿಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕಿತ್ತು ಎಂದು ಅವರು ಹೇಳಿದರು.
ಇಲ್ಲಿಯವರೆಗೆ ನಾವು ಯಾರಿಗೂ ಗುಡಿಗುಂಡಾರಗಳಿಗೆ ಹೋಗಬೇಡಿ ಎಂದು ಹೇಳಿಲ್ಲ. ಬಸವಣ್ಣನವರ ಹಾದಿಯಲ್ಲಿಯೇ ನಡೆದಿದ್ದೇವೆ. ನೀನೆ ನಿನ್ನ ಬುದ್ಧಿಯನ್ನು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿವಾನಂದ ಶ್ರೀಗಳು ಹೇಳಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ