ಮೈಸೂರು – ಮೈಸೂರಿನ ಹುಣಸೂರು ರಸ್ತೆಯಲ್ಲಿನ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿಅಪಾರ ವೆಚ್ಚದಲ್ಲಿ ಹಾಕಲಾಗಿರುವ ಪ್ರಚಾರ ಫಲಕದಲ್ಲಿ ಈಗ ಕನ್ನಡ ರಾರಾಜಿಸುತ್ತಿದೆ.
ಈ ಫಲಕದಲ್ಲಿ ಕನ್ನಡ ಭಾಷೆಗೆ ತಿಲಾಂಜಲಿ ನೀಡಿರುವ ಬಗ್ಗೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಭೇರ್ಯ ರಾಮಕುಮಾರ್ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಪತ್ರಿಕೆಗಳ ಮೂಲಕವೂ ಜನಜಾಗೃತಿ ಮೂಡಿಸಿದ್ದರು. ಈ ಬಗ್ಗೆ ಟೈಮ್ಸ್ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಇದರ ಫಲವಾಗಿ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದ ಎದುರಿಗೆ ಇರುವ ಹಾಗೂ ಹುಣಸೂರು ರಸ್ತೆಯ ಡಾ.ಡಿ.ವೀರೇಂದ್ರಹೆಗ್ಗಡೆ ವೃತ್ತದ ಬಳಿ ಇರುವ ಮುಕ್ತ ವಿಶ್ವವಿದ್ಯಾಲಯ ದ ಆವರಣದಲ್ಲಿನ ಎಲ್ಲಾ ಪ್ರಚಾರ ದರ್ಶಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಲಾಗಿದೆ.
ಇದು ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರ ಕನ್ನಡ ಜಾಗೃತಿ ಕಾರ್ಯಕ್ಕೆ ದೊರೆತ ಗೆಲುವಾಗಿದೆ.ಇದಕ್ಕೆ ಸಂಬಂಧಪಟ್ಟ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸುದ್ದಿ ಪ್ರಕಟಿಸಿದ ಎಲ್ಲಾ ಪತ್ರಿಕೆ ಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ಡಾ. ರಾಮ್ ಕುಮಾರ್ ತಿಳಿಸಿದ್ದಾರೆ.