ಕನ್ನಡ ಭಾಷೆಗೆ ಪುರಾತನ ಇತಿಹಾಸವಿದೆ: ಡಾ: ಅರವಿಂದ ಮನಗೂಳಿ

0
238

ಸಿಂದಗಿ: ಕನ್ನಡ ಭಾಷೆಗೆ ಪುರಾತನ ಇತಿಹಾಸವಿದೆ. ಮೈಸೂರು ರಾಜಮನೆತನದ ಅರಸರು ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಸಿ ಎಮ್ ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ ಅರವಿಂದ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಚ್ ಜಿ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀಮತಿ ಕಲ್ಲವ್ವ ರಂಗಪ್ಪ ಹೆಗ್ಗಣದೊಡ್ಡಿ ದತ್ತಿ ದಾನಿಗಳಾದ ಪ್ರೊ. ಎ ಆರ್ ಹೆಗ್ಗಣದೊಡ್ಡಿ. ವಿಷಯ: ಶಿಕ್ಷಣ ಮತ್ತು ಸಾಹಿತ್ಯ. ಶ್ರೀಮತಿ ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ. ದಾನಿಗಳು ಪ್ರೊ. ರಾಮಚಂದ್ರ ವಾಡೇದ  ವಿಷಯ :ಜನಪದ ಸಾಹಿತ್ಯದಲ್ಲಿ ನೀತಿ ಎರಡು ದತ್ತಿ ಗೋಷ್ಠಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಸಿನಿಮಾ, ಜಾನಪದ, ನಾಟಕ ಹಾಗು ಮೌಖಿಕ ಪರಂಪರೆಯಿಂದ ಬಂದಿರುವ ಗ್ರಾಮೀಣ ಪ್ರದೇಶದ ಸಂಸ್ಕೃತಿಯಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆದಿದೆ ಎಂದರು.

ಪದ್ಮರಾಜ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಸ್ವತಂತ್ರ ಮಹಿಳಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಹೇಮಾ ಹಿರೇಮಠ ಶಿಕ್ಷಣ ಮತ್ತು ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಿ, ಶಿಕ್ಷಣ ಜನರ ಜೀವನ ಬದಲಿಸುತ್ತದೆ. ಜೀವನದ ನಿಜವಾದ ಅಸ್ತ್ರ ಶಿಕ್ಷಣ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಜ್ಞಾನಾಭಿವೃದ್ದಿಯಾಗುತ್ತದೆ. ಶಿಕ್ಷಣ ಮತ್ತು ಸಾಹಿತ್ಯ ಎರಡು ಕಣ್ಣುಗಳಿಂದಂತೆ ಎಂದು ಅಭಿಮತ ವ್ಯಕ್ತಪಡಿಸಿದರು.

ಜಾನಪದ ಸಾಹಿತ್ಯದಲ್ಲಿ ನೀತಿ ಕುರಿತು ಪ್ರೊ. ಎಚ್ ಜಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೊ. ಮುಕ್ತಾಯಕ್ಕ ಕತ್ತಿ ಉಪನ್ಯಾಸ ನೀಡಿ, ಜನಪದರು ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ಬುನಾದಿ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯ ನೀತಿಯ ಸಂದೇಶಗಳಿವೆ. ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಪ್ರತೀಕ ಜಾನಪದ ಸಾಹಿತ್ಯವಾಗಿದೆ ಜಾನಪದ ನಮಗೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವುದಾಗಿದೆ ಎಂದರು. 

ದತ್ತಿ ದಾನಿಗಳಾದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಹಾಗು ರಾಮಚಂದ್ರ ವಾಡೇದ ಮಾತನಾಡಿ, ಸಾಹಿತ್ಯ ಕ್ರಿಯಾಶೀಲ ಚಟುವಟಿಕೆಗಳಿಂದ ಸಾಹಿಗಳು ವಂಚಿತರಾಗಬಾರದು. ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಬೇಕೆಂದರು. 

ದತ್ತಿನಿಧಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಈ ವರ್ಷ 175 ದತ್ತಿ ಗೋಷ್ಠಿಗಳನ್ನು ಪೂರ್ಣಗೊಳಿಸಿದ್ದೇವೆ. ಪ್ರತಿ ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು ಜರುಗುತ್ತವೆ. ಈ ವರ್ಷಂಪ್ರತಿ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ಸಿದ್ಧತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಬಡಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕು ಅನಿತಾ ಹಾರಿವಾಳ ಪ್ರಾರ್ಥಿಸಿದರು. ಶಾಂತಿಲಾಲ ಚವ್ವಾಣ ಸ್ವಾಗತಿಸಿದರು. ಪ್ರೊ. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.