spot_img
spot_img

ಕನ್ನಡ ನಾಡು, ನುಡಿ ಪ್ರತಿಯೊಬ್ಬರ ಉಸಿರಾಗಬೇಕು: ಈರಣ್ಣ ಬಳಿಗಾರ

Must Read

spot_img
- Advertisement -

ಬೆಟಗೇರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಮೂಡಲಗಿ: ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿಯೊಬ್ಬರೂ ಇಂದು ಸ್ಮರಿಸಬೇಕು. ಕನ್ನಡ ನಾಡು, ನುಡಿ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ, ಕಲೆ, ಭಾಷೆ, ಸಂಸ್ಕೃತಿ, ಸಂಪ್ರದಾಯ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದರು.

- Advertisement -

ಮುಂಜಾನೆ 8 ಗಂಟೆಗೆ ಗ್ರಾಮದ ವಿವಿಧ ವೃತ್ತದ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪನೆ ನಂತರ ಅಶ್ವಾರೂಢ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ಪರ ಜಯಘೋಷ, ನಾಡಿನ ಮಹಾನ್ ವ್ಯಕ್ತಿಗಳ ಆಕರ್ಷಕ ರೂಪಕ, ಕರಡಿ ಮಜಲು, ಜಾನಪದ ಕಲಾ ತಂಡಗಳು ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಭುವನೇಶ್ವರಿ ದೇವಿ, ಡಾ.ಬೆಟಗೇರಿ ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಸಡಗರದಿಂದ ನಡೆದ ಬಳಿಕ ಮಹಾನ್ ವ್ಯಕ್ತಿಗಳ ರೂಪಕ, ಕರಡಿ ಮಜಲು, ಜಾನಪದ ಕಲಾ ತಂಡ ಹಾಗೂ ಸಕಲ ವಾದ್ಯಮೇಳದವರಿಗೆ ಕಿರು ನೆನಪಿನ ಕಾಣಿಕೆ ನೀಡಿ ಸತ್ಕರಿಸಿ, ಸಿಹಿ ವಿತರಿಸಲಾಯಿತು.

ರಮೇಶ ಅಳಗುಂಡಿ, ಜಿ.ಎಚ್.ಚಿಗದಿನ್ನಿ, ಹನುಮಂತ ಪಾಟೀಲ, ಶಿವರುದ್ರ ದೇಯಣ್ಣವರ, ಅಶೋಕ ಕೋಣಿ, ಮಂಜು ಪತ್ತಾರ, ವೀರಭದ್ರ ದೇಯಣ್ಣವರ, ಭರಮಣ್ಣ ಪೂಜೇರ, ಶಂಭು ಹಿರೇಮಠ, ಶಿವು ನಾಯ್ಕರ, ನಾಗೇಶ ಬೆಳಗಲಿ, ಕಾರ್ತಿಕ ತೆರದಾಳ, ವಿಜಯ ಹಿರೇಮಠ, ಈರಣ್ಣ ದಂಡಿನ, ಗಿರೀಶ ಗಾಣಗಿ, ಮಾಯಪ್ಪ ಕೋಣಿ, ಮಹಾದೇವ ತಪಶಿ, ಕರವೇ ಕಾರ್ಯಕರ್ತರು, ಶರಣರು, ಗಣ್ಯರು, ಯುವಕರು, ಶಾಲಾ-ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ಮುಖ್ಯೋಪಾಧ್ಯಯರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಲೇಖನ : ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶಿವಣ್ಣ ಬಿರಾದಾರ

ಡಾ. ಸಿಂಪಿಲಿಂಗಣ್ಣನವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲ ತಿಳಿದ ವಿಷಯ. ಇವರು ಜನಿಸಿದ್ದು ಉತ್ತರ ಕರ್ನಾಟಕದ ಗಡಿನಾಡು ಪ್ರದೇಶ ಚಡಚಣದಲ್ಲಿ. ಇದೇ ಗ್ರಾಮದ...
- Advertisement -

More Articles Like This

- Advertisement -
close
error: Content is protected !!
Join WhatsApp Group