ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೆಳಗಾವಿಯಲ್ಲಿ ಕನ್ನಡ ನುಡಿ ವೈಭವ ಕಾರ್ಯಕ್ರಮ

Must Read

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಮಹಾಂತೇಶ ನಗರ ಮಹಾಂತ ಭವನದಲ್ಲಿ ದಿನಾಂಕ ೧-೨-೨೦೨೫ರ ಭಾನುವಾರ ಬೆ.೧೦ಕ್ಕೆ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಕಾರ್ಯಕ್ರಮ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ ನೆರವೇರಿಸುವರು. ಬೆಳಗಾವಿಯ ಹಿರಿಯ ಸಾಹಿತಿ ಡಾ. ಹೇಮಾವತಿ ಸೊನೊಳ್ಳಿ ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ ಪ್ರಾಸ್ತಾವಿಕ ನುಡಿ ಮತ್ತು ಇವರ ಚಪಾತಿಯ ಚೂರುಗಳು ಮತ್ತು ಒಂದು ಸುಡುಗಾಡು ಕಥೆ ಎರಡು ಕೃತಿಗಳನ್ನು ಹಾಗೂ ಕಾವ್ಯ ಲಹರಿ ( ಮಂಜುನಾಥ ತಿಗಡಿ ಮತ್ತು ಶ್ರೀಮತಿ ಶೈಲಜಾ ಎಂ ಕೋರಿಶೆಟ್ಟರ್) ಎರಡು ಕವನ ಸಂಕಲನಗಳನ್ನು ಮತ್ತು ನಿನ್ನ ಕಣ್ಣಲ್ಲಿ ಹಾಡು (ವಾಲ್ಯನಾಯ್ಕ ಎಲ್.) ಬಿಡುಗಡೆ ಭರಮಣ್ಣ ಉಪ್ಪಾರ, ರಾಜ್ಯ ಉಪ್ಪಾರ ನಿಗಮ ಅಧ್ಯಕ್ಷರು ನೆರವೇರಿಸುವರು.

ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರ ವಲಯ ರವಿ ಭಜಂತ್ರಿ, ಗ್ರಾಮೀಣ ಆಂಜನೇಯ ಆರ್.ಕೆ., ಸಾಹಿತಿಗಳು ಹಾಗೂ ಗೌ.ಅಧ್ಯಕ್ಷರು ಕ.ರಾ.ಬ.ಸಂಘ ಗೊರೂರು ಅನಂತರಾಜು, ಸಾಹಿತಿಗಳಾದ ಎಂ.ವೈ.ಮೆಣಸಿನಕಾಯಿ. ಡಾ.ಸುನಿಲ ಪರೀಟ, ರಾಜ್ಯಾಧ್ಯಕ್ಷರು ಕ.ಶಿ.ಸಂಘಗಳ ಪರಿಷತ್ತು ಸಂಗಮೇಶ ಖನ್ನಿನಾಯ್ಕರ, ತಾಲ್ಲೂಕು ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ.ಸಂಘ ಚಂದ್ರಶೇಖರ ಕೋಲಕಾರ, ಜಿಲ್ಲಾಧ್ಯಕ್ಷರು ಅಖಿಲ ಕ.ಸ.ಮಹಿಳಾ ನೌ.ಸಂಘ ಶ್ರೀಮತಿ ರೇಖಾ ಅಂಗಡಿ, ಬರಹಗಾರರ ಸಂಘ ಬೆಳಗಾವಿ ಗ್ರಾಮೀಣ ಅಧ್ಯಕ್ಷರು ಎಸ್.ಎನ್.ಉಪ್ಪಿನ, ಜಿಲ್ಲಾಧ್ಯಕ್ಷರು ಎಸ್.ಸಿ.ಎಸ್.ಟಿ.ಸಮನಾಮನಸ್ಕ ಶಿಕ್ಷಕರ ವೇದಿಕೆ ಶ್ರೀಮತಿ ಸುಮಾ ದೊಡಮನಿ, ಮಹಾಂತ ಭವನ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ ಭಾಗವಹಿಸುವರು. ಕಾರ್ಯಕ್ರಮ ಪ್ರಧಾನ ಸಂಯೋಜಕರು ಮತ್ತು ಜಿಲ್ಲಾಧ್ಯಕ್ಷರು ಸುರೇಶ ಸಕ್ರೆಣ್ಣವರ, ಹಿರಿಯ ಶಿಕ್ಷಕರು, ಬೆಳಗಾವಿ.

LEAVE A REPLY

Please enter your comment!
Please enter your name here

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group