ಕವನ: ನಾವುಗಳು ಹಿಂಗ್ಯಾಕೆ

Must Read

ನಾವುಗಳು ಹಿಂಗ್ಯಾಕೆ

ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳು ಹಿಂಗ್ಯಾಕೆ?

ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ ಹಿಂಗ್ಯಾಕss

ಮೂರು ದಿನದ ಬದುಕಿನಲಿ ನಾನು ನನ್ನದು ಅಂತೀವಿ
ಮರಣಿಸಿದಾಗ
ಎಲ್ಲವನೂ ಬಿಟ್ಟು ಹೋಗ್ತೀವಿ
ನೇರವಾಗಿ ನುಡಿಯುವವರೆದುರು
ಉದಾಸೀನವಾಗ್ತೀವಿ
ನಯವಂಚಕರೆದುರು
ಹಲ್ಕಿರಿದು ಸಾಗ್ತೀವಿ
ನಾವುಗಳೇ ಹಿಂಗ್ಯಾಕss

ಬೆಳ್ಳಿ ಬಂಗಾರದ
ವ್ಯಾಮೋಹದಲಿ
ಅವರಿವರಿಗೆ
ಮೋಸ ಮಾಡ್ತೀವಿ
ಹೆಣ್ಣು,ಮಣ್ಣಿಗೆ ಬಡಿದಾಡಿ ಸಾಯ್ತೀವಿss
ನಾವುಗಳೇ ಹಿಂಗ್ಯಾಕ ಪಶು ಪಕ್ಷಿ,
ಪ್ರಾಣಿಗಳಿಗೇಕಿಲ್ಲ ಈ ಮೋಹ!


ರಾಹುಲ್ ಸುಭಾಷ್ ಸರೋದೆ
ಗಂಗಾವತಿ
9482448733

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group