ಕರ್ನಾಟಕ ವಿಕಾಸ ರಂಗ ಎಲ್ಲ ರಂಗಗಳಲ್ಲಿ ಕೆಲಸ ಮಾಡಲಿ – ಎಲ್ ಎಸ್ ಶಾಸ್ತ್ರಿ

Must Read

ಬೆಳಗಾವಿ – ಗಡಿನಾಡು ಬೆಳಗಾವಿ ಆಡು ಮಾತಿನಲ್ಲಿ ಕರ್ನಾಟಕದ ಎರಡನೇ ರಾಜಧಾನಿ ಎನ್ನುವ ಅಭಿಮಾನದ ಮಾತುಗಳು ಹರಿದಾಡುತ್ತವೆ. ಸ್ಥಳೀಯ ಬೆಳಗಾವಿ ಜಿಲ್ಲೆಯವರಿಗೆ ಅದರಲ್ಲೂ ಸಾಹಿತ್ಯ ವಲಯದವರಿಗೆ ಬಹು ದಿನಗಳಿಂದಲೂ ಬಹಳ ಅನ್ಯಾಯವಾಗುತ್ತಿದೆ. ಅರ್ಹ ಸಾಹಿತಿಗಳಿಗೆ ಸಿಗಬೇಕಾದ ಪ್ರಶಸ್ತಿಗಳಾಗಲಿ ಸ್ಥಾನಮಾನಗಳಾಗಲಿ ಸಿಗುತ್ತಿಲ್ಲ. ರಾಜ್ಯಮಟ್ಟದ ಸಂಘವಾದ ಕರ್ನಾಟಕ ವಿಕಾಸರಂಗ ಇಂದು ಬೆಳಗಾವಿಯಲ್ಲಿ ಜಿಲ್ಲಾ ಘಟಕವನ್ನು ಪ್ರಾರಂಭ ಮಾಡುತ್ತಿದೆ. ಈ ಜಿಲ್ಲೆಯ ಕಲಾವಿದರು ಮತ್ತು ಸಾಹಿತಿಗಳ ಪರವಾಗಿ ಕರ್ನಾಟಕ ವಿಕಾಸ ರಂಗದ ಬೆಳಗಾವಿ ಘಟಕ ನಿಲ್ಲುವಂತಾಗಬೇಕು. ಗಡಿ ಭಾಗದಲ್ಲಿ ಕನ್ನಡ ಸಂಘಟನೆಗಳು ಬಹಳ ಇವೆ. ಆ ಎಲ್ಲ ಸಂಘಟನೆಗಳು ಒಂದಾಗಿ ಕೆಲಸಗಳನ್ನು ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ಬೆಳಗಾವಿಗರಿಗೆ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ ಎಂದು ಹಿರಿಯ ಸಾಹಿತಿ ಎಲ್ ಎಸ್ ಶಾಸ್ತ್ರಿ ಹೇಳಿದರು.

ಸೋಮವಾರ ಮಧ್ಯಾಹ್ನ ನಗರದ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ಕರ್ನಾಟಕ ವಿಕಾಸರಂಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಧಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಉಳಿಕೆ ಮತ್ತು ಬೆಳವಣಿಗೆ ಸಲುವಾಗಿ ತಳಸ್ಥರದಿಂದ ಕಾರ್ಯ ಚಟುವಟಿಕೆಗಳನ್ನು ಮಾಡುವ ಯೋಜನೆಗಳನ್ನು ಕರ್ನಾಟಕ ವಿಕಾಸರಂಗ ಹಮ್ಮಿಕೊಳ್ಳಲಿ. ಮಾರ್ಗದರ್ಶನ ಮತ್ತು ಸಹಯೋಗಕ್ಕೆ ಬೆಳಗಾವಿಯಲ್ಲಿ ಅನೇಕ ಕಲಾವಿದರು ಮತ್ತು ಸಾಹಿತಿಗಳು ಜೊತೆಗಿದ್ದಾರೆ ಎನ್ನುವ ಆಶಾಭಾವನೆಯ ಮಾತನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟಕಕಾರ ಸಾಹಿತಿ ಡಿ ಎಸ್ ಚೌಗಲೆಯವರು ಹೇಳಿದರು..

ಬೆಂಗಳೂರಿನ ಅನೇಕ ವೇದಿಕೆ ಮತ್ತು ಮಾಧ್ಯಮಗಳ ಮಧ್ಯೆ ಕೆಲಸ ಮಾಡಿದ ಅನುಭವವನ್ನು ಹೊಂದಿದ ಹಿನ್ನೆಲೆಯಲ್ಲಿ ಬೆಳಗಾವಿಯ ಕಲಾವಿದರು ಮತ್ತು ಸಾಹಿತಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯವಾಗುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸರಂಗ ಶ್ರಮಿಸಲಿದೆ ಎಂದು ಕರ್ನಾಟಕ ವಿಕಾಸರಂಗದ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶ್ರೀಮತಿ ಸರ್ವಮಂಗಳ ಅರಳಿಮಟ್ಟಿ ಹೇಳಿದರು.

ವೇದಿಕೆಯ ಮೇಲೆ ಕರ್ನಾಟಕ ವಿಕಾಸ ರಂಗದ ಉಪಾಧ್ಯಕ್ಷರುಗಳಾದ ಆರ್ ಪಿ ಪಾಟೀಲ್ ನ್ಯಾಯವಾದಿಗಳು ಹಾಗೂ ಪ್ರಕಾಶ ಹೊಸಮನಿ ಹಾಗೂ ಖಜಾಂಚಿಯಾದ ಸೋಮಲಿಂಗ ಮಾವಿನಕಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಿಂಗರಾಜ್ ಶಟ್ಟೆಣ್ಣವರ ಹಾಗೂ ಜ್ಯೋತಿ ಗವಿಮಠ ಇವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಂಡವು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಸಂಘದ ಕಾರ್ಯದರ್ಶಿ ಎಂ ವಾಯ್ ಮೆಣಸಿನಕಾಯಿಯವರು ನಿರ್ವಹಿಸಿದರು..ಶಿವಾನಂದ ತಲ್ಲೂರ್ ನಿರೂಪಿಸಿದರು.ಡಾ, ಸುನೀಲ್ ಪರೀಟ್ ವಂದಿಸಿದರು.

ಭಾಗ್ಯಶ್ರೀ ಭೈರಪ್ಪನವರ, ಕಾವೇರಿ ಕಿಲಾಡಿ, ಭವ್ಯ ಸಂಪಗಾರ, ಮಂಜುಳ ಹೊತ್ತಿಗೆಮಠ, ಶಿವಾನಂದ ನಾಯಕ, ಆರ್ ಬಿ ಬನಶಂಕರಿ, ಮಲ್ಲಿಕಾರ್ಜುನ ಕೊಳ್ಳಿ, ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group