ಬೆಂಗಳೂರಿನ ಲೇಖಕಿ, ಜಾಗೃತಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಹಾಗೂ ಸಾನೋವಿಸ್ ಲೈಫ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಸೌಜನ್ಯ ಶರತ್ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಚೈತನ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ನಡೆಸಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಮಾವೇಶದಲ್ಲಿ ಕರುನಾಡ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮೈಸೂರಿನ ಹಿರಿಯ ಸಾಹಿತಿ ಡಾ. ಭೇರ್ಯ ರಾಮಕುಮಾರ್, ಹಿರಿಯ ಸಮಾಜಸೇವಕ ನೀಲಕಂಠ ಆಡಿಗ, ಆಧ್ಯಾತ್ಮಿಕ ಚಿಂತಕ ಮುದ್ದಪ್ಪ ಆರಾಧ್ಯ, ಸಮಾಜಸೇವಕ ದೇರ್ಲ ವೆಂಕಟೇಶ್ವರಲು, ಹಾಸನದ ಸಮಾಜಸೇವಕ ಎಂ. ಸಿ. ರಾಜು,ಡಾ. ರವಿಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಡಾ. ವಸುಧ ಶ್ರೀನಿವಾಸ್ ಮೊದಲದವರು ಸಮಾವೇಶದಲ್ಲಿ ಮುಖ್ಯ ಅತಿಥಿ ಗಳಾಗಿದ್ದರು.