ಬೆಳಗಾವಿ ಜಿಲ್ಲೆಯ ಗಡಿಭಾಗ ಅಥಣಿಯ ಹಿರಿಯ ಪತ್ರಕರ್ತರು ಕನ್ನಡಪರ ಕಾಳಜಿಯುಳ್ಳ ಸಿ. ಎ. ಇಟ್ನಾಳಮಠ ರವರು ನಿಧನರಾಗಿದ್ದಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡಪರ ಸುದ್ದಿಗಳಿಗೆ ಸದಾ ಒತ್ತು ಕೊಡುತ್ತಾ ನಾಡು ನುಡಿಯ ಸೇವೆಗೆ ತಮ್ಮ ವಿಶೇಷ ಸುದ್ದಿಗಳ ಮೂಲಕ ಕನ್ನಡವನ್ನು ಕಟ್ಟುವಲ್ಲಿ ಕಂಕಣಬದ್ಧರಾಗಿದ್ದ ಮತ್ತು 2023 ನೇ ಇಸ್ವಿಯಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಕನ್ನಡ ರಾಜ್ಯೋತ್ಸವ ಕನ್ನಡ ನುಡಿ ಶ್ರೀ ಪ್ರಶಸ್ತಿ ಪಡೆಯುವುದರ ಮೂಲಕ ಕನ್ನಡಕ್ಕೆ ಸದಾ ಸ್ಮರಣೀಯ ಸೇವೆ ಸಲ್ಲಿಸಿದ ಇತ್ನಾಳಮಠರನ್ನು ಕಳೆದುಕೊಂಡು ಗಡಿಭಾಗದ ಕನ್ನಡ ಬಡವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.